Gujarat election : ಇಂದು ಗುಜರಾತ್ ಚುನಾವಣಾ ಫಲಿತಾಂಶ – ಎಲ್ಲರ ಚಿತ್ತ ಆಪ್ ನತ್ತ
ಗುಜರಾತ್ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದ್ದು, ಎಲ್ಲರ ಚಿತ್ತ AAP ಪಕ್ಷದ ಮೇಲಿದೆ. ದಿಲ್ಲಿ ಮತ್ತು ಪಂಜಾಬ್ ನಲ್ಲಿ ಅಧಿಕಾರ ಹಿಡಿದಿರುವ ಆಮ್ ಆದ್ಮಿ ಪಕ್ಷಕ್ಕೆ ಪ್ರಧಾನಿ ಮೋದಿಯವರ ತವರೂರು ಗುಜರಾತಿನಲ್ಲಿ ಜನಾದೇಶ ಹೇಗೆ ಇರಲಿದೆ ಎನ್ನುವುದು ಕುತೂಹಲ ಕೆರಳಿಸಿದೆ.

ಮತ ಎಣಿಕೆ ಬೆಳಿಗ್ಗೆ 8.00 ಗಂಟೆಗೆ ಆರಂಭವಾಗಲಿದ್ದು, ಸ್ಪಷ್ಟ ಚಿತ್ರಣ ಬೆಳಿಗ್ಗೆ 10ರ ನಂತರ ಸಿಗಲಿದೆ.
ದಿಲ್ಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ 15 ವರ್ಷದ ಆಡಳಿತ ಅಂತ್ಯಗೊಳಿಸಿ, ಅಧಿಕಾರಕ್ಕೆ ಏರುವ ಮೂಲಕ AAP, ಬಿಜೆಪಿಗೆ ಅಘಾತವನ್ನೇ ಉಂಟು ಮಾಡಿರುವಾಗ ಗುಜರಾತ್ ನಲ್ಲೂ ಪ್ರಾಬಲ್ಯ ಸಾಧಿಸುವ ಸಾಧ್ಯತೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ..
ಒಟ್ಟು 183 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ. ರಾಜಕೀಯ ಪಕ್ಷಗಳು ರಾಜ್ಯದಲ್ಲಿ ಸರ್ಕಾರ ರಚಿಸಲು ಕನಿಷ್ಠ 92 ಸ್ಥಾನಗಳನ್ನು ಪಡೆಯಬೇಕು.
gujarat-election-gujarat-election-result-today-everyones-mind-is-on-app








