Gujarat Election Result : ಐತಿಹಾಸಿಕ ಗೆಲುವಿನತ್ತ ದಾಪುಗಾಲಿಟ್ಟ ಬಿಜೆಪಿ…
ಗುಜರಾತ್ ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ದಾಖಲಿಸುವತ್ತ ಮುನ್ನುಗ್ಗುತ್ತಿದೆ. ಮತ ಎಣಿಕೆಯ ಸದ್ಯದ ಟ್ರೆಂಡ್ ಪ್ರಕಾರ ಬಿಜೆಪಿ 182 ಸ್ಥಾನಗಳ ಪೈಕಿ 156 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಇದೇ ರೀತಿ ಟ್ರೆಂಡ್ ಮುಂದುವರೆದು ಫಲಿತಾಂಶವಾಗಿ ಮುಂದುವರೆದರೆ 1985ರಲ್ಲಿ ಕಾಂಗ್ರೆಸ್ನ ಅತಿ ದೊಡ್ಡ ಗೆಲುವಿನ ದಾಖಲೆಯನ್ನು ಬಿಜೆಪಿ ಮುರಿಯಲಿದೆ.
1985ರಲ್ಲಿ ಗುಜರಾತ್ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಾಧವ್ ಸಿಂಗ್ ಸೋಲಂಕಿ ನೇತೃತ್ವದ ಕಾಂಗ್ರೆಸ್ 149 ಸ್ಥಾನಗಳನ್ನು ಗೆದ್ದಿತ್ತು. 150 ಕ್ಕಿಂತ ಹೆಚ್ಚು ಸ್ಥಾಸಗಳನ್ನ ಗಳಿಸಿದರೆ ಬಿಜೆಪಿ ಹೊಸ ಗೆಲುವಿನ ಮಾನದಂಡವನ್ನ ಸೃಷ್ಟಿಸಿ ಕಾಂಗ್ರೆಸ್ ದಾಖಲೆಯನ್ನ ಮುರಿಯಲಿದೆ.
ಗುಜರಾತ್ನಲ್ಲಿ ಒಟ್ಟು 182 ಸ್ಥಾನಗಳ ಟ್ರೆಂಡ್ನಲ್ಲಿ ಬಿಜೆಪಿ 157 ಸ್ಥಾನಗಳಲ್ಲಿ ಏಕಪಕ್ಷೀಯ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 14 ಮತ್ತು ಆಮ್ ಆದ್ಮಿ ಪಕ್ಷ 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 5 ಸ್ಥಾನಗಳು ಸ್ವತಂತ್ರ ಅಭ್ಯರ್ಥಿಗಳು ಮತ್ತು ಇತರೆ ಅಭ್ಯರ್ಥಿಗಳ ಖಾತೆಗೆ ಹೋಗುತ್ತಿರುವುದು ಕಂಡು ಬಂದಿದೆ. ಇಂದು ಬೆಳಗ್ಗೆ 8 ಗಂಟೆಗೆ ಅರ್ಧ ಗಂಟೆಯಲ್ಲಿ ಅಂಚೆ ಮತಗಳ ಎಣಿಕೆ ನಂತರ ಗುಜರಾತ್ನಲ್ಲಿ ಇವಿಎಂಗಳಿಂದ ಎಣಿಕೆ ಪ್ರಾರಂಭವಾಯಿತು.
ಜಾಮ್ನಗರದಿಂದ ಬಿಜೆಪಿಯ ರೇವಾಬಾ, ಅಹಮದಾಬಾದ್ನಿಂದ ಸಿಎಂ ಭೂಪೇಂದ್ರ ಪಟೇಲ್, ವಿರಾಮಗಾಮ್ನಿಂದ ಬಿಜೆಪಿಯ ಹಾರ್ದಿಕ್ ಪಟೇಲ್ ದೊಡ್ಡ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಮುನ್ನಡೆ ಕಂಡು ಪಕ್ಷದ ಬೆಂಬಲಿಗರು ಸಂಭ್ರಮಾಚರಣೆ ಆರಂಭಿಸಿದ್ದಾರೆ. ಎಎಪಿಯ ಸಿಎಂ ಅಭ್ಯರ್ಥಿ ಇಶುದನ್ ಗಧ್ವಿ ಕೂಡ ಮುನ್ನಡೆಯಲ್ಲಿದ್ದಾರೆ.
Gujarat Election Result








