Kantara : ರಿಷಬ್ ಶೆಟ್ಟಿ ಮತ್ತು ತಂಡಕ್ಕೆ ಎಚ್ಚರಿಕೆ ನೀಡಿದ ಪಂಜುರ್ಲಿ ದೈವ?

ಕಾಂತಾರ ಸಿನಿಮಾ ಸೂಪರ್ ಸಕ್ಸಸ್ ಆದ ನಂತರ ಕಾಂತಾರ ಪಾರ್ಟ್-2 ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಕಾಂತಾರ -2 ಗಾಗಿ ರಿಷಬ್ ಶೆಟ್ಟಿ ಮತ್ತು ಚಿತ್ರತಂಡ ಮಂಗಳೂರಿನಲ್ಲಿ ಪಂಜುರ್ಲಿ ದೈವದ ಮೊರೆ ಹೋಗಿದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರು, ರಿಷಬ್ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡ ಮಂಗಳೂರಿನಲ್ಲಿ ದೈವದ ಹರಕೆ ಕೋಲ ಮಾಡಿ, ಅನುಮತಿ ಕೇಳಿದ್ದಾರೆ.
ಪಂಜುರ್ಲಿ ದೈವವು `ಕಾಂತಾರ 2′ ಸಿನಿಮಾ ಮಾಡಲು ಅನುಮತಿ ನೀಡಿದ್ದು ಜೊತೆಗೆ ಎಚ್ಚರಿಕೆಯನ್ನೂ ನೀಡಿದೆ.
ಹಿಂದೆ ಇದ್ದ ತಂಡದ ಜೊತೆ ಶುದ್ಧಾಚಾರದಲ್ಲಿ ಮುಂದುವರಿಯಿರಿ. ಕಾಂತಾರ ಸಿನಿಮಾ ಮಾಡುವಾಗ 10 ಸಲ ಯೋಚನೆ ಮಾಡಿದ್ದೀರಿ. ಕಾಂತಾರ-2 ಮಾಡುವಾಗ 100 ಸಲ ಯೋಚಿಸಿ ಮಾಡಿ ಎಂದು ಪಂಜುರ್ಲಿ ದೈವವು ರಿಷಬ್ ಶೆಟ್ಟಿ ಮತ್ತು ತಂಡಕ್ಕೆ ಎಚ್ಚರಿಕೆ ನೀಡಿದೆ.
ಜೊತೆಗೆ ಪ್ರಯತ್ನಕ್ಕೆ ತಕ್ಕಂತೆ ಜಯ ಸಿಗುವ ರೀತಿ ಮಾಡುತ್ತೇನೆ ಎಂದು ಕಾಂತಾರ ಸಿನಿಮಾ ತಂಡಕ್ಕೆ ಪಂಜುರ್ಲಿ ದೈವವು ಆಭಯವನ್ನು ನೀಡಿದೆ.
Kantara : Panjurli God who warned Rishabh Shetty and team???








