Fifa Worldcup : ಕ್ವಾರ್ಟರ್ ಫೈನಲ್ ನಲ್ಲಿ ಮೊರಕ್ಕೊ ಪೋರ್ಚುಲ್ ಮುಖಾಮುಖಿ
ಇಂದು ಫಿಫಾ ವಿಶ್ವಕಪ್ನ ಲ್ನಲ್ಲಿ ಬಲಿಷ್ಠ ಪೋರ್ಚುಗಲ್ ಹಾಗೂ ಮೊರೊಕ್ಕೊ ತಂಡಗಳು ಮುಖಾಮುಖಿಯಾಗುತ್ತಿವೆ.
ಅಲ್ ತುಮಾಮಾ ಮೈದಾನದಲ್ಲಿ ನಡೆಯಲಿರುವ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ. ಮೊನ್ನೆ ಪೋರ್ಚುಗಲ್ ತಂಡ ರೊನಾಲ್ಡೊ ಅನುಪಸ್ಥಿತಿಯಲ್ಲಿ ಪ್ರಿಕ್ವಾರ್ಟರ್ನಲ್ಲಿ ಸ್ವಿಟ್ಜರ್ಲೆಂಡ್ ವಿರುದ್ಧ 6-1 ಗೋಲುಗಳಿಂದ ಅತಿ ದೊಡ್ಡ ಗೆಲುವು ದಾಖಲಿಸಿತ್ತು. ಮೊರಾಕ್ಕೊ ತಂಡ ಬಲಿಷ್ಠ ಸ್ಪೇನ್ ವಿರುದ್ಧ ಗೆದ್ದು ಅಚ್ಚರಿ ಫಲಿತಾಂಶದೊಂದಿಗೆ ಕ್ವಾರ್ಟರ್ ಪ್ರವೇಶಿಸಿತ್ತು.
ಮೊರೊಕ್ಕೊ ಮತ್ತು ಪೋರ್ಚುಗಲ್ ತಂಡ ವಿಶ್ವಕಪ್ನಲ್ಲಿ ಮೂರನೆ ಬಾರಿಗೆ ಮುಖಾಮುಖಿಯಾಗುತ್ತಿವೆ. 1986ರಲ್ಲಿ ಮೊದಲ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಮೊರಕ್ಕೊ ತಂಡ 3-1 ಗೋಲುಗಳಿಂದ ಗೆದ್ದುಕೊಂಡಿತ್ತು. 2018ರಲ್ಲಿ ಪೋರ್ಚುಗಲ್ 1-0 ಗೋಲನಿಂದ ಗೆದ್ದು ಸೇಡು ತೀರಿಸಿಕೊಂಡಿತ್ತು.
ಈ ವಿಶ್ವಕಪ್ನಲ್ಲಿ 5 ಪಂದ್ಯಗಳ್ನನಾಡಿರುವ ಮೊರಾಕ್ಕೊ ಸೋಲು ಕಂಡಿಲ್ಲ. ಮೊರಾಕ್ಕೊ ಮೊದಲ ಬಾರಿಗೆ ಕ್ವಾರ್ಟರ್ ಆಡುತ್ತಿದೆ. ಮೊರಾಕ್ಕೊ ಇಂದು ಪೋರ್ಚುಗಲ್ ವಿರುದ್ಧ ಗೆದ್ದರೆ ವಿಶ್ವಕಪ್ನಲ್ಲಿ ಸೆಮಿಫೈನಲ್ ತಲುಪಿದ ಮೊದಲ ಆಫ್ರಿಕಾ ರಾಷ್ಟ್ರವೆಂಬ ಎಂಬ ಹಿರಿಮೆಗೆ ಪಾತ್ರವಾಗಲಿದೆ. ಈ ಹಿಂದಿನ ಮೂರು ಕ್ವಾರ್ಟರ್ ಫೈನಲ್ನಲ್ಲಿ ಕ್ಯಾಮರೂನ್ 1990ರಲ್ಲಿ , ಸೆನೆಗಲ್ 2002ರಲ್ಲಿ ಮತ್ತ ಘಾನಾ 2010ರಲ್ಲಿ ಸೋತ ಆಫ್ರಿಕಾ ರಾಷ್ಟ್ರಗಳಾಗಿವೆ.
ಪೋರ್ಚುಗಲ್ ತಂಡ ವಿಶ್ವಕಪ್ನಲ್ಲಿ ಮೂರನೆ ಬಾರಿ ಕ್ವಾರ್ಟರ್ ಫೈನಲ್ ಆಡುತ್ತಿದೆ. 1966ರಲ್ಲಿ ಕೊರಿಯಾ ವಿರುದ್ಧ ಕ್ವಾರ್ಟರ್ ಗೆದ್ದಿತ್ತು. 2006ರಲ್ಲಿ ಇಂಗ್ಲೆಂಡ್ ವಿರುದ್ಧ ಪೆನಬಾಲ್ಟಿ ಶೂಟೌಟ್ನಲ್ಲಿ ಗೆದ್ದಿತ್ತು.
ಪೋರ್ಚುಗಲ್ ತಂಡ ಈ ವಿಶ್ವಕಪ್ನಲ್ಲಿ 12 ಗೋಲುಗಳನ್ನು ಹೊಡೆದಿದೆ. 1966ರ ವಿಶ್ವಕಪ್ನಲ್ಲಿ ಪೋರ್ಚುಗಲ್ 17 ಗೋಲು ಹೊಡೆದಿತ್ತು. 12 ಗೋಲುಗಳನ್ನು ತಂಡದ ಬೇರೆ ಬೇರೆ ಆಟಗಾರರು ಹೊಡೆದಿದ್ದಾರೆ.
ಮೊರಾಕ್ಕೊ ಕಳೆದ ನಾಲ್ಕು ಪಂದ್ಯಗಳಲ್ಲಿ ಗೋಲು ಹೊಡೆಯಲು ಎದುರಾಳಿಗಳಿಗೆ ಅವಕಾಶ ಕೊಟ್ಟಿಲ್ಲ.
ಪೋರ್ಚುಗಲ್ ಪರ ಬ್ರೂನೊ ಫರ್ನಾಂಡೀಸ್ ಟೂರ್ನಿಯಲ್ಲಿ 5 ಗೋಲು ಹೊಡದು ತಂಡದ ಪರ ಅತಿ ಹೆಚ್ಚು ಗೋಲು ಹೊಡೆದ ಆಟಗಾರ ಎನಿಸಿದ್ದಾರೆ.
ಪೋರ್ಚುಗಲ್ ತಂಡದ ಗೊಂಜಾಲೊ ರಾಮೋಸ್ ಹ್ಯಾಟ್ರಿಕ್ ಗೋಲು ಹೊಡೆದಿದ್ದು ಇಂದಿನ ಪಂದ್ಯದಲ್ಲಿ ರೊನಾಲ್ಡೊ ಬದಲು ಕಣಕ್ಕಿಳಿಯುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
ಈ ವಿಶ್ವಕಪ್ನಲ್ಲಿ ಎರಡೂ ತಂಡಗಳು ನಡೆದ ಬಂದ ಹಾದಿ
ಪೋರ್ಚುಗಲ್
ನೈಜಿರಿಯಾ ವಿರುದ್ಧ 4-0 ಗೆಲುವು
ಘಾನಾ ವಿರುದ್ಧ 3-2 ಗೆಲುವು
ಉರುಗ್ವೆ ವಿರುದ್ಧ 2-0
ಕೊರಿಯಾ ವಿರುದ್ಧ 1-2 ಸೋಲು
ಪ್ರಿ ಕ್ವಾರ್ಟರ್
ಸ್ವೀಟ್ಜರ್ಲೆಂಡ್ ವಿರುದ್ಧ 6-1 ಗೆಲುವು
ಮೊರಾಕ್ಕೊ
ಕ್ರೊವೇಷಿಯಾ ವಿರುದ್ಧ ಡ್ರಾ
ಬೆಲ್ಜಿಯಂ ವಿರುದ್ಧ 2-0 ಗೆಲುವು
ಕೆನಡಾ ವಿರುದ್ಧ 2-1 ಗೆಲುವು
ಪ್ರಿಕ್ವಾರ್ಟರ್
ಸ್ಪೇನ್ ವಿರುದ್ಧ ಪೆನಾಲ್ಟಿಯಲ್ಲಿ ರೋಚಕ ಗೆಲುವು








