Fifa Worlcup ಕ್ವಾರ್ಟರ್ ಫೈನಲ್ ನಲ್ಲಿ ಫ್ರಾನ್ಸ್ ಗೆ ಆಂಗ್ಲರ ಸವಾಲು
ಫಿಫಾ ವಿಶ್ವಕಪ್ನ ನಾಲ್ಕನೆ ಕ್ವಾರ್ಟರ್ ಫೈನಲ್ನಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ಮತ್ತು ಬಲಿಷ್ಠ ಇಂಗ್ಲೆಂಡ್ ತಂಡಗಳು ಸೆಣಸಲಿವೆ.
ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಇಂಗ್ಲೆಂಡ್ ಮತ್ತು ಫ್ರಾನ್ಸ್ ತಂಡಗಳಿಗೆ ಇದು ಡು ಆರ್ ಡೈ ಪಂದ್ಯವಾಗಿದೆ. 2006ರ ನಂತರ ಕ್ವಾರ್ಟರ್ ಆಡಲಿರುವ ಮೊದಲ ಹಾಲಿ ಚಾಂಪಿಯನ್ ತಂಡ ಫ್ರಾನ್ಸ್ ಆಗಿದೆ.
ಹಾಲಿ ಚಾಂಪಿಯನ್ ಫ್ರಾರನ್ಸ್ ಫೇವರಿಟ್ ಹಣೆಪಟ್ಟಿಯೊಂದಿಗೆ ಇಂದಿನ ಪಂದ್ಯ ಗೆಲ್ಲುವ ಸಾಧ್ಯತೆ ಹೆಚ್ಚಿದೆ.ಆದರೆ ಟೂರ್ನಿಯಲ್ಲಿ ಇಂಗ್ಲೆಂಡ್ ಬಲಿಷ್ಠವಾಗಿ ಕಂಡು ಬಂದಿದೆ.
ಫ್ರಾನ್ಸ್ನ ಕೈಲಿಯಾನ್ ಎಂಬಾಪೆ ಟೂರ್ನಿಯಲ್ಲ ಅತಿ ಹೆಚ್ಚು ಗೋಲು ಹೊಡೆದ ಆಟಗಾರರಾಗಿದ್ದಾರೆ. ಈ ಪಂದ್ಯ ಎಂಬಾಪೆ ಹಾಗೂ ಇಂಗ್ಲೆಂಡ್ ತಂಡದ ತಾರಾ ನಾಯಕ ಹ್ಯಾರಿ ಕೇನ ಅವರ ನಡುವಿನ ಕದನವಾಗಿದೆ. ಎಂಬಾಪೆ ಎದುರಾಳಿಯ ಭದ್ರ ಕೋಟೆಯನ್ನು ಭೇದಿಸಿದರೆ ತಂಡಕ್ಕೆ ಗೆಲುವು ಖಚಿತವಾಗಲಿದೆ. ಹ್ಯಾರಿಕೇನ್ ಇಂಗ್ಲೆಂಡ್ ಪರ ಈವರೆಗೂ 52 ಗೋಲುಗಳನ್ನು ಹೊಡೆದಿದ್ದು ಇದರಲ್ಲಿ 11 ಗೋಲುಗಳನ್ನು ವಿಶ್ವಕಪ್ ಹಾಗೂ ಯೂರೋ ಟೂರ್ನಿಗಳಲ್ಲಿ ಹೊಡೆದಿದ್ದಾರೆ.
ಕೈಲಿಯಾನ್ ಎಂಬಾಪೆ ಅವರನ್ನು ನಿಯಂತ್ರಿಸುವುದೇ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಸವಾಲಾಗಿದೆ.
ಇಂಗ್ಲೆಂಡ್ ಮತ್ತು ಫ್ರಾನ್ಸ್ ತಂಡಗಳು ವಿಶ್ವಕಪ್ನಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ. ಎರಡು ಬಾರಿ ಆಂಗ್ಲರು ಗೆದ್ದಿದ್ದಾರೆ. 1966ರಲ್ಲಿ 2-0 ಗೆದ್ದುಕೊಂಡಿತ್ತುಘಿ. 1982ರಲ್ಲಿ 3-1 ರಿಂದ ಗೆದ್ದು ಕೊಂಡಿದೆ.
2017ರ ನಂತರ ಇದೆ ಮೊದಲ ಬಾರಿಗೆ ಫ್ರಾನ್ಸ್ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ನಾಕೌಟ್ ಹಂತದಲ್ಲಿ ಯೂರೋಪ್ ರಾಷ್ಟ್ರಗಳ ವಿರುದ್ಧ ಇಂಗ್ಲೆಂಡ್ 6 ಬಾರಿ ಸೋತಿದೆ. ಫ್ರಾನ್ಸ್ ತಂಡ ನಾಕೌಟ್ನಲ್ಲಿ 10 ಪಂದ್ಯಗಳ ಪೈಕಿ 8ರಲ್ಲಿ ಗೆದ್ದಿದೆ.
ಸತತ ಎರಡನೆ ಬಾರಿ ಸೆಮಿಫೈನಲ್ಗೇರಲು ಇಂಗ್ಲೆಂಡ್ ಕಾತರವಾಗಿದೆ. ಇಂಗ್ಲೆಂಡ್ ಈ ಟೂರ್ನಿಯಲ್ಲಿ ಒಟ್ಟು 12 ಗೋಲುಗಳನ್ನು ಹೊಡೆದಿದೆ. 2018ರ ವಿಶ್ವಕಪ್ನಲ್ಲೂ 12 ಗೋಲು ಹೊಡೆದಿತ್ತು. ಫ್ರಾನ್ಸ್ ತಂಡ ಟೂರ್ನಿಯಲ್ಲಿ 9 ಗೋಲುಗಳನ್ನು ಹೊಡೆದಿದೆ.
ಫ್ರಾನ್ಸ್ ತಂಡದ ಮತ್ತೋರ್ವ ತಾರಾ ಆಟಗಾರ ಒಲಿವಿರ್ ಗಿರೌಡ್ ಈ ಟೂರ್ನಿಯಲ್ಲು ಮೂರು ಗೊಲುಗಳನ್ನು ಹೊಡೆದಿದ್ದಾರೆ. ಕೈಲಿಯನ್ ಎಂಬಾಪೆ 5 ಗೋಲು ಹೊಡೆದಿದ್ದಾರೆ.
ವಿಶ್ವ ಫುಟ್ಬಾಲ್ನ ಬಲಿಷ್ಠ ತಂಡಗಳಾದ ಇಂಗ್ಲೆಂಡ್ ಮತ್ತು ಫ್ರಾನ್ಸ್ ತಂಡಗಳು ಟೂರ್ನಿಯಲ್ಲಿ ನಡೆದ ಬಂದ ಹಾದಿ ಇಲ್ಲಿದೆ.
ಫ್ರಾನ್ಸ್
ಆಸ್ಟ್ರೇಲಿಯಾ ವಿರುದ್ಧ 4-1 ಗೆಲುವು
ಡೆನ್ಮಾರ್ಕ್ ವಿರುದ್ಧ 2-1 ಗೆಲುವು
ಟ್ಯುನೀಶಿಯಾ ವಿರುದ್ಧ 1-0 ಗೆಲುವು
ಪ್ರಿ ಕ್ವಾರ್ಟರ್
ಪೋಲೆಂಡ್ ವಿರುದ್ಧ 1-0 ಗೆಲುವು
ಇಂಗ್ಲೆಂಡ್
ಜರ್ಮನಿ ವಿರುದ್ಧ 3-3 ಗೋಲು ಡ್ರಾ
ಇರಾನ್ ವಿರುದ್ಧ 6-2 ಭರ್ಜರಿ ಗೆಲುವು
ಯುಎಸ್ಎ ವಿರದ್ಧು ಡ್ರಾ
ವೇಲ್ಸ್ ವಿರುದ್ಧ 3-0 ಡ್ರಾ
ಪ್ರಿ ಕ್ವಾರ್ಟರ್
ಸೆನೆಗಲ್ ವಿರುದ್ಧ 3-0 ಗೆಲುವು








