Tumakuru : 108 ಆಂಬ್ಯುಲೆನ್ಸ್ ಕರ್ಮಕಾಂಡ ಬಯಲಿಗೆಳೆದ ತಹಶೀಲ್ದಾರ್….
ಆಂಬುಲೆನ್ಸ್ ಲಭ್ಯವಿದ್ದರು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ತೆರಳದೆ ಬೇಜವಬ್ದಾರಿ ತೋರಿಸಿದ 108 ಸಿಬ್ಬಂದಿಯ ಕರ್ಮಕಾಂಡವನ್ನ ಕೊರಟಗೆರೆ ತಹಶೀಲ್ದಾರ್ ನಹೀದಾ ಜಂಜಂ ಅವರು ಬಯಲು ಮಾಡಿದ್ದಾರೆ.
ಮೊನ್ನೆ ಕೊರಟಗೆರೆ ತಾಲ್ಲೂಕಿನ ಇರಕಸಂದ್ರ ಕಾಲೋನಿಯಲ್ಲಿ ಚಿರತೆ ದಾಳಿಗೊಳಗಾಗಿ ಇಬ್ಬರು ಮಕ್ಕಳು ಗಾಯಗೊಂಡಿದ್ದರು. ಈ ವೇಳೆ ಆಂಬ್ಯುಲೆನ್ಸ್ ಲಭ್ಯವಿದ್ದರೂ ಸ್ಥಳಕ್ಕೆ ತೆರಳದೇ ಬೇಜವಾಬ್ದಾರಿ ತೋರಿಸಿದ್ದಾರೆ 108 ಸಿಬ್ಬಂದಿ.
ಇದರಿಂದ ಸಿಟ್ಟಿಗೆದ್ದ ತಹಶೀಲ್ದಾರ್ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ. ರಾಮಕ್ಕ ಅನ್ನೋ ಮಹಿಳೆ ಹೆಸರಿನಲ್ಲಿ 108 ಆಂಬ್ಯುಲೆನ್ಸ್ ಸೇವೆಗೆ ತಹಶೀಲ್ದಾರ್ ಕರೆ ಮಾಡಿ ವಡ್ಡಗೆರೆ ಬಳಿ ಅಪಘಾತವಾಗಿದೆ,ಕೂಡಲೇ ಆಂಬ್ಯುಲೆನ್ಸ್ ಬೇಕು ಅಂತಾ ಮಾಹಿತಿ ನೀಡಿದ್ದಾರೆ.
ಇದಕ್ಕೆ ಪ್ರತಿಯಾಗಿ ತೋವಿನಕೆರೆಯಲ್ಲಿ ಆಂಬ್ಯುಲೆನ್ಸ್ ಇದೆ, 1 ಗಂಟೆ ತಡವಾಗುತ್ತೆ ಬೇರೆ ಖಾಸಗಿ ವಾಹನದಲ್ಲಿ ತೆರಳುವಂತೆ 108 ಸಿಬ್ಬಂದಿಯಿಂದ ಹಾರಿಕೆ ಉತ್ತರ ನೀಡಿದ್ದಾರೆ. ಆಂಬ್ಯುಲೆನ್ಸ್ ಇದ್ದರೂ ಸ್ಥಳಕ್ಕೆ ತೆರಳದೇ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ.
1 ಗಂಟೆಯಾದರೂ ಆಂಬ್ಯುಲೆನ್ಸ್ ಬಾರದ್ದಕ್ಕೆ ಸ್ಥಳದಿಂದ ವಾಪಸ್ ತೆರಳಿದ ತಹಶೀಲ್ದಾರ್ ನಹೀದಾ ಜಂಜಂ ಅವರು ನಿರ್ಲಕ್ಷ ತೋರಿದ 108 ಆಂಬ್ಯುಲೆನ್ಸ್ ವ್ಯವಸ್ಥೆ ವಿರುದ್ದ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.
Tumakuru : Tehsildar exposed 108 Ambulance scandal….








