Gujarat : ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಪ್ರಮಾಣ ವಚನ ಸ್ವೀಕಾರ…
ಭಾರತೀಯ ಜನತಾ ಪಕ್ಷದ ನಾಯಕ ಭೂಪೇಂದ್ರ ಪಟೇಲ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಗಾಂಧಿನಗರದ ಹೊಸ ಸೆಕ್ರೆಟರಿಯೇಟ್ ಬಳಿಯ ಹೆಲಿಪ್ಯಾಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು 18ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಬೋಧಿಸಿದರು.
ಬಿಜೆಪಿ ಶಾಸಕರಾದ ಕನುಭಾಯಿ ದೇಸಾಯಿ, ಋಷಿಕೇಶ್ ಪಟೇಲ್, ರಾಘವಜಿ ಪಟೇಲ್ ಮತ್ತು ಬಲವಂತಸಿಂಹ ರಜಪೂತ್ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಹೆಚ್ಚುವರಿಯಾಗಿ, ಕುವರ್ಜಿ ಬವಲಿಯಾ, ಮುಲುಭಾಯಿ ಬೇರಾ, ಕುಬೇರ್ ದಿಂಡೋರ್, ಭಾನುಬೆನ್ ಬಬಾರಿಯಾ ಅವರು ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಡಿಸೆಂಬರ್ 8 ರಂದು ನಡೆದ ಗುಜರಾತ್ ಅಸೆಂಬ್ಲಿ ಚುನಾವಣೆಯ ಎಣಿಕೆಯಲ್ಲಿ ಬಿಜೆಪಿ 182 ಸದಸ್ಯ ಬಲದ ಸದನದಲ್ಲಿ ದಾಖಲೆಯ 156 ಸ್ಥಾನಗಳನ್ನು ಗೆಲ್ಲುವ ಮೂಲಕ ಸತತ ಏಳನೇ ಅವಧಿಗೆ ಅಧಿಕಾರವನ್ನ ವಶಮಾಡಿಕೊಂಡಿದೆ. ಕಾಂಗ್ರೆಸ್ 17 ಮತ್ತು ಎಎಪಿ 5 ಕ್ಷೇತ್ರಗಳನ್ನ ಗೆದ್ದಿವೆ.
Bhupendra Patel takes oath as Chief Minister of Gujarat for second term