Koppala Accident: ಕಡೆಕೊಪ್ಪ ಬಳಿ ಕಾರು ಬೈಕ್ ನಡುವೆ ಡಿಕ್ಕಿ – ಓರ್ವ ಸಾವು…
ಬೈಕ್ ಮತ್ತು ಕಾರಿನ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರ್ಘಟನೆ ಕುಷ್ಟಗಿ ತಾಲೂಕಿನ ಕಡೆಕೊಪ್ಪ ಗ್ರಾಮದ ಬಳಿ ನಡೆದಿದೆ.
ಕುಷ್ಟಗಿಯಿಂದ ಜಾಲಿಹಾಳ ಗ್ರಾಮದ ಪರಮಗೌಡ ಮಾಲೀಪಾಟೀಲ್ (೬೪) ಬೈಕ್ ನಲ್ಲಿ ಹೋಗುತ್ತಿದ್ದಾಗ ಇಳಕಲ್ ಕಡೆಯಿಂದ ಬಂದ ಕಾರು ಡಿಕ್ಕಿ ಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕಲಿಕೇರಿ ಕ್ರಾಸ್ ಹತ್ತಿರ ಘಟನೆ ನಡೆದಿದ್ದು, ಕುಷ್ಟಗಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Koppala Accident: Collision between car and bike near Kadekoppa – one death…








