Ranaji Tourney : ತವರಿನಲ್ಲಿ ಸರ್ವಿಸ್ ತಂಡವನ್ನು ಎದುರಿಸಲಿದೆ ಕರ್ನಾಟಕ
2022-23 ರ ಸಾಲಿನ ರಣಜಿ ಟ್ರೋಫಿ ದೇಸಿ ಟೂರ್ನಿ ಇಂದಿನಿಂದ ಆರಂಭವಾಗಿದೆ. 8 ಬಾರಿ ಚಾಂಪಿಯನ್ ಕರ್ನಾಟಕ ತಂಡ ತವರಿನಲ್ಲಿ ಸರ್ವಿಸ್ ತಂಡವನ್ನು ಎದುರಿಸಲಿದೆ.
ರಣಜಿ ಟೂರ್ನಿಯಲ್ಲಿ ಸರ್ವಿಸ್ ವಿರುದ್ಧ ಮೊದಲ ಪಂದ್ಯ ಆಡಲಿದೆ. ರಾಜ್ಯ ತಂಡಕ್ಕೆ ಸರ್ವಿಸ್ 30ನೇ ಎದುರಾಳಿಯಾಗಿದೆ.ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡುವ ಸಾಧ್ಯತೆ ಇದೆ.
ಟೂರ್ನಿಯಲ್ಲಿ 38 ತಂಡಗಳು ಕಣಕ್ಕಿಳಿಯಲಿದ್ದು ಎಲೈಟ್ ಸಿ ಗುಂಪಿನಲ್ಲಿ ಕರ್ನಾಟಕ ಸ್ಥಾನ ಪಡೆದಿದೆ. ಮೊದಲ ಎರಡೂ ಪಂದ್ಯಗಳನ್ನು ತವರು ಮೈದಾನ ಚಿನ್ನಸ್ವಾಮಿಯಲ್ಲಿ ಆಡಲಿದೆ.
ಕಳೆದ ಆವೃತ್ತಿಯಲ್ಲಿ ರಾಜ್ಯ ತಂಡ ಕ್ವಾರ್ಟರ್ನಲ್ಲಿ ಸೋತಿತ್ತು. ಈ ಬಾರಿ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದೆ. ಮಯಾಂಕ್ ಅಗರ್ ವಾಲ್ ತಂಡವನ್ನು ಮುನ್ನಡೆಸಲಿದ್ದಾರೆ.
ಕಿರಿಯರ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ವಿಶಾಲ್ ಹಾಗೂ ನಿಕಿನ್ ಜೋಸ್ ಮೊದಲೆರಡೂ ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ.








