Balochistan : 6 ಪತ್ನಿಯರು 54 ಮಕ್ಕಳ ತಂದೆ ಅಬ್ದುಲ್ಲಾ ಹೃದಯಾಘಾತದಿಂದ ಸಾವು…
6 ಪತ್ನಿಯರು 54 ಮಕ್ಕಳ ತಂದೆ ಇನ್ನಿಲ್ಲ
75 ವರ್ಷದ ಅಬ್ದುಲ್ಲಾ ಸಾವು
ಹೃದಯಾಘಾತದಿಂದ ಸಾವು
ಬಲೂಚಿಸ್ತಾನದಲ್ಲಿ ಘಟನೆ
ಒಂದೇ ಮನೆಯಲ್ಲಿ 150 ಜನ ವಾಸ
6 ಪತ್ನಿಯರು 54 ಮಕ್ಕಳನ್ನ ಹೊಂದಿದ್ದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವನಪ್ಪಿರೋ ಘಟನೆ ಬಲೂಚಿಸ್ತಾನದಲ್ಲಿ ನಡೆದಿದೆ..
ಅಬ್ದುಲ್ಲಾ ಎಂಬಾತ ಮೃತ ದುರ್ದೈವಿ.. ಈತನಿಗೆ ಈಗ 75 ವರ್ಷವಾಗಿತ್ತು.. 18 ನೇ ವಯಸ್ಸಿಗೆ ಅಬ್ದುಲ್ಲಾ ಮೊದಲ ಮದುವೆಯಾಗಿದ್ದ..
ಅದಾದ ನಂತರ ಒಬ್ಬರಾದ ಮೇಲೆ ಮತ್ತೊಬ್ಬರಂತೆ ಇನ್ನೂ ಐವರನ್ನ ಮದುವೆಯಾಗಿದ್ದಾನೆ.. ಈತನಿಗೆ ಒಟ್ಟು 54 ಜನ ಮಕ್ಕಳಿದ್ದಾರೆ..
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಬ್ದುಲ್ಲಾಗೆ ಇತ್ತೀಚೆಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ,. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯ್ತಾದ್ರೆ ಅಷ್ಟರಲ್ಲಾಗಲೇ ಅಬ್ದುಲ್ಲಾ ಉಸಿರು ನಿಲ್ಲಿಸಿದ್ದರು..
ಈತ ಯಾವ ಪತ್ನಿಯರಿಗೂ ಡಿವೋರ್ಸ್ ನೀಡಿರಲಿಲ್ಲ.. ಎಲ್ಲಾ ಪತ್ನಿಯರು ಮಕ್ಕಳು ಒಂದೇ ಮನೆಯಲ್ಲೇ ವಾಸವಾಗಿದ್ದರು..
6 ಪತ್ನಿಯರ ಪೈಕಿ ಈಗಾಗಲೇ ಇಬ್ಬರು ನಿಧನರಾಗಿದ್ದರು..
54 ಮಕ್ಕಳ ಪೈಕಿ 12 ಮಕ್ಕಳೂ ಸಹ ಸಾವನಪ್ಪಿದ್ದಾರೆ..
ಈಗ 42 ಮಕ್ಕಳು ಹಾಗೂ 4 ಪತ್ನಿಯರನ್ನ ಅಗಲಿದ್ದಾರೆ..
ಅಷ್ಟೇ ಅಲ್ಲ ಮಕ್ಕಳು ಮೊಮ್ಮಕ್ಕಳು ಪತ್ನಿಯರು ಸೇರಿದಂತೆ ಒಟ್ಟು 150 ಮಂದಿ ಒಂದೇ ಕುಟುಂಬದಲ್ಲಿ ವಾಸವಾಗಿದ್ದು , ಈಗ ಮನೆಯ ಆಧಾರಸ್ಥಂಭವಾಗಿದ್ದ ಅದ್ಬುಲ್ಲಾ ಎಲ್ಲರನ್ನೂ ಅಗಲಿದ್ದಾರೆ..
Balochistan – 6 wifes , 54 childrens dad died








