Belagavi Adhiveshana : ಬೆಳಗಾವಿಯ ಅಧಿವೇಶನದಲ್ಲಿ ಪೂರ್ಣ ಹಾಜರಾತಿ ಕಡ್ಡಾಯ – ವಿಶ್ವೇಶ್ವರ ಹೆಗಡೆ ಕಾಗೇರಿ
ಡಿಸೆಂಬರ್ 19 ರಿಂದ ರಿಂದ ಡಿಸೆಂಬರ್ 30 ರ ವರೆಗೂ ನಡೆಯಲಿರುವ ಬೆಳಗಾವಿಯ ಅಧಿವೇಶನದಲ್ಲಿ ಪೂರ್ಣ ಹಾಜರಾತಿ ಕಡ್ಡಾಯ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೂಚಿಸಿದ್ದಾರೆ..
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ತಯಾರಿ ನಡೆಯುತ್ತಿದೆ..
ಇದರಲ್ಲಿ ಪೂರ್ಣ ಹಾಜರಾತಿ ಇರಬೇಕೆಂದು ಎಲ್ಲ ಶಾಸಕರಿಗೂ ಸೂಚಿಸಲಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಕಾಗೇರಿ ಅವರು ಅಧಿವೇಶನದ ಪೂರ್ವಸಿದ್ಧತೆಗಳನ್ನು ಸೋಮವಾರ ಪರಿಶೀಲಿಸಿದರು.. ಆ ನಂತರ ಮಾತನಾಡಿದ ಅವರು ಕೆಲ ಸಚಿವರು, ಶಾಸಕರು ಅಧಿವೇಶನದ ವೇಳೆ ಗೋವಾ, ಮಹಾರಾಷ್ಟ್ರ ಕಡೆಗೆ ಪ್ರವಾಸಕ್ಕೆ ಹೋಗುತ್ತಾರೆ.
ಗಂಭೀರ ವಿಷಯಗಳ ಚರ್ಚೆಯಲ್ಲಿ ಗೈರಾಗುತ್ತಾರೆ ಎಂದು ಹಲವರು ದೂರಿದ್ದಾರೆ. ಎಲ್ಲರೂ ಎಲ್ಲ ಕಲಾಪಗಳಲ್ಲೂ ಪಾಲ್ಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.
ಅಲ್ಲದೇ ನಾನು ಅಧಿವೇಶನಕ್ಕೆ ಹಾಜರಾಗುವುದಿಲ್ಲ ಎಂದು ಕೆಲವರು ಹೇಳಿದ್ದಾರೆ. ಅದು ತಪ್ಪು. ಅಧಿವೇಶನವನ್ನು ಯಾರೂ ಹಗುರವಾಗಿ ತೆಗೆದುಕೊಳ್ಳಬಾರದು ಹಗುರವಾಗಿ ಮಾತನಾಡಬಾರದು ಎಂದು ಹೇಳಿದ್ದು ಪರೋಕ್ಷವಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ..








