Arjun Tendulkar: ತಂದೆಯ ಹಾದಿಯಲ್ಲೇ ಸಾಗಿದ ಮಗ – ಚೊಚ್ಚಲ ರಣಜಿ ಪಂದ್ಯದಲ್ಲೇ ಶತಕ…
ತಂದೆಯ ಹಾದಿಯಲ್ಲೇ ಸಾಗಿದ ಮಗ ಚೊಚ್ಚಲ ರಣಜಿ ಪಂದ್ಯದಲ್ಲೇ ಶತಕ ಬಾರಿಸಿ ತಂದೆಗೆ ತಕ್ಕ ಮಗ ಎಂಬುದನ್ನ ನಿರೂಪಿಸುತ್ತಿದ್ದಾನೆ. ನಾವು ಮಾತನಾಡುತ್ತಿರುವುದ ಬೇರೆ ಯಾರು ಅಲ್ಲ the God of cricket ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಕುರಿತು.
ಭಾರತೀಯ ಕ್ರಿಕೆಟ್ ನ ಶ್ರೇಷ್ಠ ಬ್ಯಾಟ್ಸ್ಮನ್ ಆಗಿದ್ದ ಸಚಿನ್ ತೆಂಡೂಲ್ಕರ್ ಡಿಸೆಂಬರ್ ತಿಂಗಳಲ್ಲಿ ರಣಜಿಗೆ ಪದಾರ್ಪಣೆ ಮಾಡಿ ಮೊದಲ ಪಂದ್ಯದಲ್ಲೇ ಶತಕ ಭಾರಿಸಿದ್ದರು. ಅಪ್ಪನ ಹಾದಿಯಲ್ಲೇ ಸಾಗುತ್ತಿರುವ ಮಗ ಅರ್ಜುನ್ ತೆಂಡೂಲ್ಕರ್ 34 ವರ್ಷಗಳ ನಂತರ ಡಿಸೆಂಬರ್ ತಿಂಗಳಲ್ಲಿ ರಣಜಿ ಪ್ರವೇಶಿಸಿ ಚೊಚ್ಚಲ ಪಂದ್ಯದಲ್ಲೇ ಶತಕ ಭಾರಿಸಿದ್ದಾರೆ.
ತೆಂಡೂಲ್ಕರ್ ತಮ್ಮ ಮೊದಲ ಪಂದ್ಯವನ್ನ 1988 ಡಿಸೆಂಬರ್ 11 ರಂದು ಗುಜರಾತ್ ವಿರುದ್ಧ ಆಡಿದರೇ ಅರ್ಜುನ್ ಮೊದಲ ಪಂದ್ಯವನ್ನ ಗೋವಾ ಪರವಾಗಿ ರಾಜಸ್ಥಾನ ವಿರುದ್ಧ ಈ ಸಾಧನೇ ಮಾಡಿದ್ದಾರೆ.
ಅರ್ಜುನ್ ಶತಕ ಬಾರಿಸಿ ಅಜೇಯರಾಗಿ ಆಡುತ್ತಿದ್ದಾರೆ. ಇದೇ ಸಮಯದಲ್ಲಿ ಗೋವಾದ ಮೊದಲ ಇನ್ನಿಂಗ್ಸ್ ಸ್ಕೋರ್ 400 ರನ್ ಸಮೀಪಕ್ಕೆ ಬಂದು ತಲುಪಿದೆ.
ಅರ್ಜುನ್ ತೆಂಡೂಲ್ಕರ್ ಯಾವುದೇ ದುರ್ಬಲ ತಂಡದ ವಿರುದ್ಧ ಈ ಸಾಧನೆ ಮಾಡಿಲ್ಲ ಎರಡು ಬಾರಿ ರಣಜಿ ಚಾಂಪಿಯನ್ ತಂಡವಾಗಿರುವ ಅದರಲ್ಲೂ ಕಮಲೇಶ್ ನಾಗರಕೋಟಿ, ಮಹಿಪಾಲ್ ಲೋಮ್ರೋರ್ ಅವರಂತಹ ಐಪಿಎಲ್ ಸ್ಟಾರ್ ಬೌಲರ್‌ಗಳು ಇರುವ ರಾಜಸ್ಥಾನ ವಿರುದ್ಧ ಈ ಸಾಧನೆ ಮಾಡಿದ್ದಾರೆ.
Sachin Tendulkar Son Arjun Tendulkar Batting Records








