Birth in plane : ವಿಮಾನದ ಟಾಯ್ಲೆಟ್ ರೂಮ್ ನಲ್ಲಿ ಮಗು ಜನನ – ತಾಯಿಗೆ ಗೊತ್ತಿರಲಿಲ್ಲ ತಾನು ಗರ್ಭಿಣಿ ಎಂದು…
ತಾನು ಗರ್ಭಿಣಿ ಎಂಬ ಅರಿವಿರದ ಮಹಿಳೆಯೊಬ್ಬಳು ವಿಮಾನದಲ್ಲಿ ಪ್ರಯಾಣ ಮಾಡುವಾಗ ಟಾಯ್ಲೆಟ್ ರೂಮ್ ನಲ್ಲಿಯೇ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.
ತಮಾರಾ ಎಂದು ಗುರುತಿಸಲಾದ ಮಹಿಳೆ, ಈಕ್ವೆಡಾರ್‌ನ ಗುಯಾಕ್ವಿಲ್‌ನಿಂದ ಆಮ್‌ಸ್ಟರ್‌ಡ್ಯಾಮ್‌ಗೆ ಕೆಎಲ್‌ಎಂ ರಾಯಲ್ ಡಚ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಅನಿರೀಕ್ಷಿತವಾಗಿ ಹೆರಿಗೆಯಾಗುವ ಮೂಲಕ ವಿಮಾನದಲ್ಲಿದ್ದ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದರು.
ತಮಾರಾ ಈಕ್ವೆಡಾರ್‌ನಿಂದ ಸ್ಪೇನ್‌ನಲ್ಲಿರುವ ತನ್ನ ಮನೆಗೆ ಪ್ರಯಾಣ ಬೇಳಸುತ್ತಿದ್ದಳು. ವಿಮಾನ ನೆದರ್ ಲ್ಯಾಂಡ್ ನಲ್ಲಿ ಲ್ಯಾಂಡ್ ಆಗುವ ಕೆಲವೇ ಗಂಟೆಗಳ ಮೊದಲು ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಶೌಚಾಲಯಕ್ಕೆ ಹೋದ ಮಹಿಳೆ ನಂತರ ಹೊರ ಬಂದಿದ್ದು ಮಗುವಿನೊಂದಿಗೆ.
“ತಾಮಾರಾ ತಾನು ಗರ್ಭಿಣಿ ಆಗಿದಿದ್ದು ತಿಳಿದಿರಲಿಲ್ಲ ಎಂದು ತಿಳಿದು ಬಂದಿದೆ ಈ ಘಟನೆಯಿಂದ ಆಕೆ ಸಾಕಷ್ಟು ಆಘಾತಕ್ಕೊಳಗಾಗಿದ್ದಾರೆ ಎಂದು ಆಸ್ಪತ್ರೆಯ ವೈದರು ತಿಳಿಸಿದ್ದಾರೆ.
ನ್ಯೂಯಾರ್ಕ್ ಪೋಸ್ಟ್‌ನ ಪ್ರಕಾರ, ಆಸ್ಟ್ರಿಯಾದ ಇಬ್ಬರು ವೈದ್ಯರು ಮತ್ತು ನರ್ಸ್ ವಿಮಾನದಲ್ಲಿದ್ದರು ಮತ್ತು ಹೆರಿಗೆಯಲ್ಲಿ ತಮಾರಾಗೆ ಸಹಾಯ ಮಾಡಿದ್ದಾರೆ, “ಇದಕ್ಕಾಗಿ ನಾವು ಅವರಿಗೆ ತುಂಬಾ ಕೃತಜ್ಞರಾಗಿರುತ್ತೇವೆ” ಎಂದು ಏರ್‌ಲೈನ್ ವಕ್ತಾರರು ಹೇಳಿದರು. ಮಗುವಿಗೆ ಮ್ಯಾಕ್ಸಿಮಿಲಿಯಾನೊ ಎಂದು ಹೆಸರಿಡಲಾಗಿದೆ.
ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು KLM ಏರ್ಲೈನ್ಸ್ ಹೇಳಿದೆ. ಸ್ಚಿಪೋಲ್‌ಗೆ ಆಗಮಿಸಿದ ನಂತರ, ತಾಯಿ ಮತ್ತು ನವಜಾತ ಮಗುವನ್ನ ಆಂಬ್ಯುಲೆನ್ಸ್‌ನಲ್ಲಿ ಸ್ಪಾರ್ನೆ ಗಸ್ತೂಯಿಸ್ ಗೆ ಕರೆದೊಯ್ಯಲಾಸಗಿದೆ.
Woman Who Didn’t Know She Was Pregnant Gives Birth On Plane








