kempegowda airport : ಕೆಂಪೇಗೌಡ ಏರ್ ಪೋರ್ಟ್ ಗೆ ಹುಸಿ ಬಾಂಬ್ ಬೆದರಿಕೆಯ ಟ್ವಿಟ್…
ಅನಾಮಿಕ ವ್ಯಕ್ತಿಯೊಬ್ಬ ಟೀಟರ್ ಮೂಲಕ ಕೆಂಪೇಗೌಡ ಏರ್ ಪೋರ್ಟ್ ಗೆ ಹುಸಿ ಬಾಂಬ್ ಬೆದರಿಕೆ ಟ್ವೀಟ್ ಮಾಡಿದ್ದಾನೆ. ಇದೀಗ ಟ್ವೀಟ್ ಮಾಡಿದ ವ್ಯಕ್ತಿಗಾಗಿ ಪೊಲೀಸರು ಬೆನ್ನತ್ತಿದ್ದಾರೆ.
ಡಿಸೆಂಬರ್ 10ರಂದು ಅಪರಿಚಿತ ವ್ಯಕ್ತಿಯೊಬ್ಬ ತನ್ನ ಟ್ವಿಟರ್ ಖಾತೆಯಲ್ಲಿ ನಾನು ಬೆಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಹಾಕುತ್ತೇನೆ ಆದ್ದರಿಂದ ಅವರು ನಗರಕ್ಕೆ ಹತ್ತಿರದಲ್ಲಿ ಮರು ನಿರ್ಮಾಣ ಮಾಡಬಹುದು ಎಂದು ಇಂಗ್ಲಿಷ್ ನಲ್ಲಿ ಟ್ವಿಟ್ ಮಾಡಿದ. ಟ್ವೀಟ್ ಮಾಡಿದ ಪ್ರಕರಣದ ಕುರಿತು ಸೈಬರ್ ಕ್ರೈಮ್ ಪೊಲೀಸರ ಸಹಯೋಗದೊಂದಿಗೆ ಸಿಟಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕೃತ ಟ್ವಿಟರ್ ಗೆ ಬಾಂಬ್ ಬೆದರಿಕೆಯ ಸಂದೇಶವನ್ನ ಟ್ಯಾಗ್ ಮಾಡುವ ಮೂಲಕ ಡಿಸೆಂಬರ್ 10 ರಂದು ಟ್ವೀಟ್ ಮಾಡಲಾಗಿದೆ. ತಕ್ಷಣ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ರೂಪಾ ಮ್ಯಾಥ್ಯೂ ಅವರು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.
ಇದು ನಾನ್ ಕಾಗ್ನಿಜಬಲ್ ಕೇಸ್ ಆಗಿರುವುದರಿಂದ, ಪೊಲೀಸ್ ಅಧಿಕಾರಿಗಳು ಸಂಬಂಧಪಟ್ಟ ಸ್ಥಳೀಯ ನ್ಯಾಯಾಲಯವನ್ನು ಸಂಪರ್ಕಿಸಿ, ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲು ಅನುಮತಿ ಕೋರಿದರು. ಅದರಂತೆ, ಐಪಿಸಿ 505 ಹಾಗೂ 507 ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ.
ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಸೈಬರ್ ಕ್ರೈಂ ಪೊಲೀಸರ ಸಹಾಯದಿಂದ ಟ್ವೀಟ್ ಮಾಡಿದ ವ್ಯಕ್ತಿಯ ವಿವರಗಳನ್ನು ಕೋರಿ ಟ್ವಿಟರ್ಗೆ ಪತ್ರ ಬರೆದಿದ್ದಾರೆ. ವಿವರಗಳನ್ನ ಪಡೆದ ನಂತರ ತನಿಖೆ ಆರಂಭಿಸುವುದ್ದಾಗಿ ಟ್ವಿಟರ್ ಸಂಸ್ಥೆ ಹೇಳಿದೆ.
Kempegowda Airport: Fake bomb threat tweeted to Kempegowda Airport…








