NEET 2023 – ನೀಟ್ ಪರೀಕ್ಷಾ ವೇಳಾ ಪಟ್ಟಿ ದಿನಾಂಕ ಪ್ರಕಟಿಸಿದ NTA…
ರಾಷ್ಟ್ರೀಯ ಪರೀಕ್ಷಾ ಏಜನ್ಸಿ (NTA) ರಾಷ್ಟ್ರ ಮಟ್ಟದ ಪರೀಕ್ಷೆಗಳಾದ ನೀಟ್ (NEET UG), ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ (CUET) ಪರೀಕ್ಷೆಯ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ.
NTA ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಿರುವ ಪ್ರಕಾರ ಮೇ 7 ರಂದು ನೀಟ್ ಮತ್ತು ಮೇ 21 ರಿಂದ ಮೇ 31 2023 ರ ವರೆಗೆ CUET ಪರೀಕ್ಷೆಗಳನ್ನ ನಡೆಸಲಾಗುತ್ತಿದೆ. ಅಧಿಕೃತ ವೆಬ್ಸೈಟ್ nta.ac.in ನಲ್ಲಿ ಸಂಪೂರ್ಣ ವೇಳಾಪಟ್ಟಿಯನ್ನ ಪರೀಶೀಲಿಸಬಹುದು.
NTA ಶೀಘ್ರದಲ್ಲೇ ನೀಟ್ ಯುಜಿ 2023, ಸಿಯುಇಟಿ ಯುಜಿ , ಪಿಜಿ 2023 ಮತ್ತು ICAR AIEEA 2023 ಪ್ರವೇಶ ಪರೀಕ್ಷೆಗಳಿಗೆ ನೋಂದಣಿಗಾಗಿ ಅಪ್ಲಿಕೇಶನ್ ವಿಂಡೋವನ್ನು ತೆರೆಯಲಿದೆ.
ಈ ಬಾರಿ, ಎನ್ಟಿಎ ಜೆಇಇ ಮುಖ್ಯ ಮತ್ತು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ) ಗಾಗಿ ಮೀಸಲು ದಿನಾಂಕಗಳನ್ನು ಸಹ ಪ್ರಕಟಿಸಿದೆ.
JEE ಮೇನ್ ಜನವರಿ ಸೆಷನ್ ಫೆಬ್ರವರಿ 1, 2 ಮತ್ತು 3 ಮತ್ತು ಎರಡನೇ ಸೆಷನ್ ಏಪ್ರಿಲ್ 6,8,10,11 ಮತ್ತು 12 ರ ನಡುವೆ ನಡೆಸಲಾಗುವುವುದ ಅಥವಾ ಏಪ್ರಿಲ್ 13 ಮತ್ತು 15 ರಂದು ನಡೆಸಲಾಗುತ್ತದೆ.
ಈ ವರ್ಷವೂ ವಿದ್ಯಾರ್ಥಿಗಳು ಜೆಇಇ ಮುಖ್ಯ ಪರೀಕ್ಷೆಗೆ ಎರಡು ಅವಕಾಶಗಳನ್ನ ಪಡೆಯುತ್ತಾರೆ. ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್-jeemain.nta.nic.in ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಜನವರಿ 12, 2023 ರವರೆಗೆ ರಾತ್ರಿ 9 ಗಂಟೆಯವರೆಗೆ ಅರ್ಜಿ ಸಲ್ಲಿಸಬಹುದು.
NEET 2023 – NEET Exam Time Table Date Published by NTA…








