Mohammed Siraj : ಲಿಟನ್ ದಾಸ್ ಸೀರಾಜ್ ಗೆ ಸರಿ ಉತ್ತರ ಕೊಟ್ಟ ಸಿರಾಜ್ , ಕೊಹ್ಲಿ ಸಾಥ್..!!
ಭಾರತ ಬಾಂಗ್ಲಾ ನಡುವಿನ ಎರಡನೆ ದಿನದಾಟದ ಪಂದ್ಯ ಆಟಗಾರರ ಮಾತಿನ ಚಕಮಕಿಗೆ ವೇದಿಕೆಯಾಯಿತು.
ಬಾಂಗ್ಲಾ ನಾಯಕ ಲಿಟನ್ ದಾಸ್ ಬ್ಯಾಟಿಂಗ್ ಮಾಡುತ್ತಿದ್ದಾಗ ಸಿರಾಜ್ ಸ್ಲೆಡ್ಜಿಂಗ್ ಮಾಡಿದರು.
ಲಿಟನ್ ದಾಸ್ ಸೀರಾಜ್ ಬಳಿ ತೆರೆಳಿ ಕಿವಿಗೆ ಕೈಯಿಟ್ಟು ಕೇಳಿಸುತ್ತಿಲ್ಲ ಎಂದು ಸನ್ನೆ ಮಾಡಿದರು. ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂದು ಅರಿತ ಆನ್ ಫೀಲ್ಡ್ ಅಂಪೈಯರ್ ತಿಳಿಗೊಳಿಸಿದರು.
ನಂತರದ ಎಸೆತದಲ್ಲಿ ಲಿಟನ್ ದಾಸ್ ಅವರನ್ನು ಸಿರಾಜ್ ಬೌಲ್ಡ್ ಮಾಡಿ ಬಾಯಿಮುಚ್ಚಿಕೊಳ್ಳುವಂತೆ ಸನ್ನೆ ಮಾಡಿದರು. ಸ್ಲಿಪ್ನಲ್ಲಿದ್ದ ವಿರಾಟ್ ಕೊಹ್ಲಿ ಲಿಟನ್ ಮಾಡಿದಂತಯೇ ಸನ್ನೆ ಮಾಡಿ ಕಾಲೆಳೆದರು.
ಒಟ್ಟಿನಲ್ಲಿ ನಾಯಕ ಲಿಟನ್ ದಾಸ್ ಅವರ ವಿಕೆಟ್ ಪಡೆದು ಮೊಹ್ಮದ್ ಸಿರಾಜ್ ತಕ್ಕ ಪಾಠಕಲಸಿದ್ದಾರೆ. ಬಾಂಗ್ಲಾ ತಂಡಕ್ಕೆ ವಿಲನ್ ಆದ ಸಿರಾಜ್ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 20 ರನ್ ನೀಡಿ 3 ವಿಕೆಟ್ ಪಡೆದರು.








