Rahul Dravid : ರಾಹುಲ್ ದ್ರಾವಿಡ್ ಬಳಿ ಕ್ಷಮೆಯಾಚಿಸಿದ ಅಲೆನ್ ಡೋನಾಲ್ಡ್
ಟೀಮ್ ಇಂಡಿಯಾದ ತರಬೇತುದಾರ ರಾಹುಲ್ ದ್ರಾವಿಡ್ ದಕ್ಷಿಣ ಆಫ್ರಿಕಾ ತಂಡದ ಮಾಜಿ ವೇಗಿ ಅಲೆನ್ ಡೋನಾಲ್ಡ್ ಅವರ ಕ್ಷಮೆಯನ್ನು ಸ್ವೀಕರಿಸಿದ್ದಾರೆ.
1997ರಲ್ಲಿ ಡರ್ಬನ್ನಲ್ಲಿ ನಡೆದರತ ಮತ್ತು ದ.ಆಫ್ರಿಕಾ ನಡುವಿನ ಏಕದಿನ ಪಂದ್ಯದ ವೇಳೆ ವೇಗಿ ಅಲೆನ್ ಡೋನಾಲ್ಡ್ ಬ್ಯಾಟಿಂಗ್ ಮಾಡುತ್ತಿದ್ದ ರಾಹುಲ್ ದ್ರಾವಿಡ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
ಇದೀಗ ಖಾಸಗಿ ಸಂದರ್ಶನವೊಂದರಲ್ಲಿ ಅಂದಿನ ಘಟನೆ ಬಗ್ಗೆ ನೆನೆದು ಅಲೆನ್ ಡೊನಾಲ್ಡ್ ಪಶ್ಚತಾಪಪಟ್ಟಿದ್ದಾರೆ. ಜೊತೆಗೆ ರಾಹುಲ್ ದ್ರಾವಿಡ್ ಅವರಿಗೆ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಅವರೊಂದಿಗೆ ರಾತ್ರಿ ಊಟಕ್ಕೆ ಮಾಡಲು ಇಷ್ಟಪಡ್ತುತ್ತೇನೆ. ಎಂಥ ಒಳ್ಳೆಯ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.
ಈ ವಿಡಿಯೊದ ಸಂದರ್ಶನವನ್ನು ನೋಡಿರುವ ರಾಹುಲ್ ದ್ರಾವಿಡ್, ನಾನು ಅವರೊಂದಿಗೆ ಊಟ ಮಾಡಲು ಇಷ್ಟಪಡುತ್ತೇನೆ. ಆದರೆ ಅವರೇ ಹಣ ಪಾವತಿಸಬೇಕೆಂದು ನಗೆ ಚಟಾಕಿ ಹಾರಿಸಿದ್ದಾರೆ.







