ಗಿಲ್, ಪೂಜಾರ ಶತಕದ ನೆರವು – ಬಾಂಗ್ಲಾಗೆ 513 ರನ್ ಗಳ ಕಠಿಣ ಗುರಿ
ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ಎರಡು ವಿಕೆಟ್ ಕಳೆದುಕೊಂಡು 258 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.
ಬಾಂಗ್ಲಾದೇಶ ಇದೀಗ 513 ರನ್ ಗಳ ಕಠಿಣ ಗುರಿ ಹೊಂದಿದೆ. ಚೇತೇಶ್ವರ ಪೂಜಾರ 51 ಇನ್ನಿಂಗ್ಸ್ ಗಳ ನಂತರ ಶತಕ ಭಾರಿಸಿದ್ದಾರೆ 102 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಪೂಜಾರ ಶತಕ ಗಳಿಸಿದ ಕೂಡಲೇ ನಾಯಕ ರಾಹುಲ್ ಡಿಕ್ಲೇರ್ ಮಾಡಿಕೊಂಡಿದ್ದಾರೆ.
ಎರಡನೇ ಇನ್ನಿಂಗ್ಸ್ ಆರಂಭದಲ್ಲಿ ಬ್ಯಾಟಿಂಗ್ ಇಳಿದ ಶುಭಮನ್ ಗಿಲ್ ಮೊದಲ ಟೆಸ್ಟ್ ಶತಕ ದಾಖಲಿಸಿದ್ದಾರೆ. 110 ರನ್ ಗಳಿಸಿ ಔಟಾದರು. ನಾಯಕ ಕೆಎಲ್ ರಾಹುಲ್ ವೈಫಲ್ಯ ಮುಂದುವರೆದಿದ್ದು, 23 ರನ್ ಗಳಿಸಿ ಬೇಗನೇ ಔಟಾದರು.
ಚಟ್ಟೋಗ್ರಾಮ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಬಾಂಗ್ಲಾದೇಶದ ಮೊದಲ ಇನಿಂಗ್ಸ್ 150 ರನ್‌ಗಳಿಗೆ ಅಂತ್ಯಗೊಂಡಿತು. ಕುಲದೀಪ್ ಯಾದವ್ ಗರಿಷ್ಠ 5 ವಿಕೆಟ್ ಪಡೆದ ಮಿಂಚಿದರು. ಮೊಹಮ್ಮದ್ ಸಿರಾಜ್ ಮೂರು ವಿಕೆಟ್, ಉಮೇಶ್ ಯಾದವ್ ಮತ್ತು ಅಕ್ಷರ್ ಪಟೇಲ್ 1-1 ವಿಕೆಟ್ ಪಡೆದರು.
ಈ ಮೂಲಕ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 254 ರನ್‌ಗಳ ಮುನ್ನಡೆ ಸಾಧಿಸಿದೆ. ಆದರೆ, ಭಾರತ ತಂಡದ ನಾಯಕ ಕೆಎಲ್ ರಾಹುಲ್ ಬಾಂಗ್ಲಾದೇಶಕ್ಕೆ ಫಾಲೋ ಆನ್ ಹೇರುವ ಬದಲು ಸ್ವತಃ ಬ್ಯಾಟಿಂಗ್ ಇಳಿಯಲು ನಿರ್ಧರಿಸಿದ್ದಾರೆ.
INDvBAN: Gill, Pujara help with century – tough target for 513 runs for Bangladesh








