ಕಾಂಗ್ರೆಸ್ ಅಧ್ಯಕ್ಷರಾಗಿ ಬೇಜವಾಬ್ದಾರಿ ಹೇಳಿಕೆ ಕೋಡೊದು ಸರಿಯಲ್ಲ – ಉಗ್ರ ಶಾರಿಕ್ ಪರ ಹೇಳಿಕೆಗೆ ಮುತಾಲಿಕ್ ತಿರುಗೇಟು….
ತನಿಖೆ ಇಲ್ಲದೇ ಶಾರಿಕ್ ಗೆ ಉಗ್ರ ಪಟ್ಟ ಕಟ್ಟಲಾಗಿದೆ ಎಂಬ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆಗೆ ಧಾರವಾಡದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ ಪ್ರತಿಕ್ರಿಯೆ ನೀಡಿದ್ದು ಡಿಕೆಶಿ ಹೇಳಿಕೆಯನ್ನ ಖಂಡಿಸಿದ್ದಾರೆ.
ಶ್ರೀರಾಮ ಸೇನೆ ಸಂಘಟನೆ ಇದನ್ನ ವಿರೋಧ ಮಾಡುತ್ತೆ, ಟೆರರಿಸ್ಟ ಪೂರಕವಾಗಿ ಹೇಳಿಕೆ ಕೊಟ್ಟಿದ್ದು ಅಕ್ಷಮ್ಯ ಅಪರಾಧ ಮುಸ್ಲಿಂ ಓಟಿಗಾಗಿ ಕಾಂಗ್ರೆಸ್ ತುಷ್ಟಿಕರಣ ಮಾಡಿದ ಪರಿಮಾಣ ಇಡಿ ದೇಶದಲ್ಲಿ ಕಸದ ಬುಟ್ಟಿಯಲ್ಲಿ ಬಿದ್ದಿದೆಆದರೂ ಇವರಿಗೆ ಬುದ್ಧಿ ಬಂದಿಲ್ಲಾ ಎಂದು ಮುತಾಲಿಕ್ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರಾಗಿ ಬೇಜವಾಬ್ದಾರಿ ಹೇಳಿಕೆ ಕೋಡೊದು ಸರಿಯಲ್ಲ. ಟೆರರಿಸ್ಟ್ ಗಳ ಬಗ್ಗೆ ಫುಲ್ವಾಮಾ ಹಾಗೂ ಮುಂಬೈ ದಾಳಿ ಹೇಳಿಕೆ ಸರಿಯಲ್ಲ. ನೂರಾರು ಜನ ಸಾವಾಗಬೇಕಾ, ರಕ್ತ ಹರಿಯಬೇಕಾ, ಹೆಣಗಳು ಬಿಳಬೇಕಾ ? ಪೊಲೀಸ್ ಇಲಾಖೆ ಇದನ್ನ ಹಿಡಿದು ಅನಾಹುತ ತಪ್ಪಿಸಿದ್ದಾರೆ. ಅದನ್ನ ಬಿಟ್ಟು ಟೆರರಿಸ್ಟ ಪರ ಮಾತನಾಡಿದ್ದು , ಓಟಿಗಾಗಿ ಹೇಳಿಕೆ ಕೊಟ್ಟಿದ್ದು ದೇಶಕ್ಕೆ ಅಪಾಯಕಾರಿ ಇದನ್ನ ವಾಪಸ್ ಪಡೆದು ದೇಶಕ್ಕೆ ಕ್ಷಮೆ ಕೇಳಬೇಕು ಎಂದೂ ಈ ರೀತಿಯ ಹೇಳಿಕೆ ಕೊಡುವುದನ್ನ ನಿಲ್ಲಿಸಬೇಕು ಎಂದು ಮುತಾಲಿಕ್ ವಾಗ್ದಾಲಿ ನಡೆಸಿದ್ದಾರೆ.
ಮುಂದುವರೆದು, ದೇಶಕ್ಕೆ ಸುರಕ್ಷತೆ ಮುಖ್ಯ, ನಿಮ್ಮ ರಾಜಕಾರಣ ಅಲ್ಲಾ. ನಿಮ್ಮ ತುಷ್ಟಿಕರಷದಿಂದಲೇ ಇಲ್ಲಿಗೆ ಬಂದು ನಿಂತಿದ್ದು ನೀವು ಇನ್ನು ಅರ್ಥ ಮಾಡಿಕೊಂಡಿಲ್ಲ. ಸರ್ವನಾಶ ಆಗಿ ಹೋಗ್ತಿರಾ ನೀವು. ನಿಮ್ಮ ಹೇಳಿಕೆ ವಾಪಸ್ ಡೆಯದೇ ಇದ್ದರ ನಾವು ಹಾಗು ರಾಜ್ಯಾದ್ಯಂತ ಹೋರಾಟ ಮಾಡ್ತೆವೆ ಎಂದು ಮುತಾಲಿಕ್ ಎಚ್ಚರಿಸಿದ್ದಾರ.
Muthalik: Kododu’s irresponsible statement as Congress president is not correct – Sriram Sena hits back at Ugra Shariq’s statement…








