ರಾಜ್ಯಾದ್ಯಾಂತ ಇಂದು ಕಾಲೇಜು ಬಂದ್ ಗೆ NSUI ಕರೆ…
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ರಾಜ್ಯಾದ್ಯಂತ ಕಾಲೇಜು ಬಂದ್ ಗೆ NSUI ವಿದ್ಯಾರ್ಥಿ ಸಂಘಟನೆ ಕರೆ ಕೊಟ್ಟಿದೆ.
ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆ ಫಲಿತಾಂಶ ವಿಳಂಬ, ರಾಷ್ಟ್ರೀಯ ಶಿಕ್ಷಣ ನೀತಿಯ ಅಸಂಘಟಿತ ಮತ್ತು ಅವೈಜ್ಞಾನಿಕ ಅನುಷ್ಠಾ, ನ ವಿದ್ಯಾರ್ಥಿ ವೇತನ ಮಂಜೂರು ವಿಳಂಬ ಧೋರಣೆ, ಬಸ್ ಸಾರಿಗೆ ಸಮಸ್ಯೆ, ಸರ್ಕಾರಿ ಕಾಲೇಜು ಶುಲ್ಕ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿಗಳಿಂದು ಬೀದಿಗಿಳಿಯಲಿದ್ದಾರೆ.
ರಾಜ್ಯದ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ನಿರಾಸಕ್ತಿ ತೋರುತ್ತಿದೆ ಎಂದು ಕಾಂಗ್ರೆಸ್ನ ವಿದ್ಯಾರ್ಥಿ ಘಟಕ ರಾಷ್ಟ್ರೀಯ ವಿದ್ಯಾರ್ಥಿ ಸಂಘ ಆರೋಪಿಸಿದೆ. ಸರ್ಕಾರದ ನಡೆ ಖಂಡಿಸಿ ಸರ್ಕಾರಿ ವಿವಿ ಹಾಗೂ ಪದವಿ ಕಾಲೇಜುಗಳು ಬಂದ್ಗೆ ಕರೆ ನೀಡಲಾಗಿದೆ.
ಬಂದ್ ಕರೆ ನಡುವೆಯೂ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಬೆಳಗ್ಗೆ ಕಾಲೇಜಿನಲ್ಲಿ ತರಗತಿಗಳು ಆರಂಭಗೊಂಡಿವೆ. ಬಂದ್ ಬಗ್ಗೆ ಸ್ಪಷ್ಟ ಚಿತ್ರಣ ಸಿಗದ ಹಿನ್ನೆಲೆ ಕೆಲವು ಕಡೆ ವಿದ್ಯಾರ್ಥಿಗಳು ಕಾಲೇಜಿನತ್ತ ಆಗಮಿಸುತ್ತಿದ್ದಾರೆ.
NSUI: NSUI calls for statewide college bandh today…








