ಮಡಿಕೇರಿ : ರಾಜ್ಯದಲ್ಲಿ ರೆಸಾರ್ಟ್ ಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ್ದು, ಕೊಡಗಿನಲ್ಲಿ ರೆಸಾರ್ಟ್ ತೆರೆಯುತ್ತಿದ್ದಂತೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಕುಟುಂಬ ಖಾಸಗಿ ಭೇಟಿ ನೀಡಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ದಂಪತಿ ಹಾಗೂ ಕುಮಾರಸ್ವಾಮಿ ಸಹೋದರಿಯರು ಸೇರಿದಂತೆ ಒಟ್ಟು ಅವರ ಕುಟುಂಬದ ಹತ್ತು ಜನರು ಮಡಿಕೇರಿಯ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ..
ಹೆಚ್ ಡಿಕೆ ಕುಟುಂಬ ಇಂದಿನಿಂದ ಮೂರು ದಿನಗಳ ಕಾಲ ಅಂದರೆ ಭಾನುವಾರದವರೆಗೆ ರೆಸಾರ್ಟ್ ನಲ್ಲೇ ತಂಗಲಿದ್ದಾರೆ ಎಂದು ತಿಳಿದು ಬಂದಿದೆ. ನಿಖಿಲ್ ಅವರ ಮದುವೆ ಇತ್ತೀಚೆಗೆ ಅಷ್ಟೇ ಆಗಿರುವುದರಿಂದ ಇಡೀ ಕುಟುಂಬ ಖಾಸಗಿ ಭೇಟಿ ಮಾಡಿದ್ದಾರೆ. ಇದು ಖಾಸಗಿ ಭೇಟಿ ನೀಡಿರುವುದರಿಂದ ಕುಮಾರಸ್ವಾಮಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳಲು ನಿರಾಕರಿಸಿದ್ದಾರೆ.






