shazia marri: ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆ ಹಾಕಿದ ಪಾಕ್ ಸಚಿವೆ…
ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ವಿವಾದಿತ ಹೇಳಿಕೆಯನ್ನ ಭಾರತ ತೀವ್ರವಾಗಿ ಖಂಡಿಸಿತ್ತಿರುವ ಬೆನ್ನಲ್ಲೆ ಪಾಕಿಸ್ತಾನದ ಇನ್ನೊಬ್ಬ ಸಚಿವೆ ಭಾರತಕ್ಕೆ ಪರಮಾಣು ದಾಳಿಯ ಬಾಂಬ್ ಬೆದರಿಕೆಯನ್ನ ಹಾಕಿದ್ದಾರೆ.
ಭಾರತದ ವಿರುದ್ಧ ವಿಷ ಉಗುಳಿರುವ ಪಾಕ್ ಸಚಿವೆ ಶಾಜಿಯಾ ಮಾರಿ, ‘ಪಾಕಿಸ್ತಾನ ಬಳಿ ಅಣುಬಾಂಬ್ ಇದೆ ಎಂಬುದನ್ನು ಭಾರತ ಮರೆಯಬಾರದು. ನಮ್ಮ ಪರಮಾಣು ಶಕ್ತಿಯು ಮೌನವಾಗಿರಲು ಅಲ್ಲ. ಅಗತ್ಯವಿದ್ದರೆ ನಾವು ಹಿಂದೆ ಸರಿಯುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.
ಮೋದಿ ಸರ್ಕಾರ ಹೋರಾಡಿದರೆ ತಕ್ಕ ಉತ್ತರ ಸಿಗುತ್ತದೆ. ಮೌನವಾಗಿರಲು ಪಾಕಿಸ್ತಾನಕ್ಕೆ ಪರಮಾಣು ರಾಷ್ಟ್ರದ ಸ್ಥಾನಮಾನ ನೀಡಿಲ್ಲ ಎಂಬುದನ್ನು ಭಾರತ ಮರೆಯಬಾರದು ಎಂದು ಶಾಜಿಯಾ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ. ಪಾಕಿಸ್ತಾನಕ್ಕೂ ಹೇಗೆ ಉತ್ತರಿಸಬೇಕು ಎಂಬುದು ಗೊತ್ತಿದೆ. ನೀವು ಪದೇ ಪದೇ ಪಾಕಿಸ್ತಾನವನ್ನು ದೂಷಿಸುತ್ತಿದ್ದರೆ, ಪಾಕಿಸ್ತಾನವು ಮೌನವಾಗಿ ಕೇಳಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡಿತ್ತು.
ಮೋದಿಯನ್ನ ಲಾಡೆನ್ ಗೆ ಹೋಲಿಸಿದ ಪಾಕ್ ವಿದೇಶಾಂಗ ಸಚಿವ
ಬಿಲಾವಲ್ ಭುಟ್ಟೊ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ಗೆ ಹೋಲಿಸಿದ್ದರು. ಅಮೆರಿಕದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧಿವೇಶನದ ನೇಪಥ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಲಾವಲ್ ಭುಟ್ಟೊ, ಭಾರತ ಸರ್ಕಾರವು ಮಹಾತ್ಮ ಗಾಂಧಿಗಿಂತ ಹಿಟ್ಲರ್ನಿಂದ ಪ್ರಭಾವಿತವಾಗಿದೆ ಎಂದು ಆರೋಪಿಸಿದರು.
shazia marri: Pakistan minister who threatened India with nuclear war…








