Basanagowda Patil Yatnal : ಮೀಸಲಾತಿ ಘೋಷಣೆ ಮಾಡಬೇಕು , ಇಲ್ಲದಿದ್ರೆ ಮುಂದೆ ಇದೆಯಲ್ಲ ಚುನಾವಣೆ- ಯತ್ನಾಳ್
ಗದಗ : ಡಿಸೆಂಬರ್ 19 ರಂದು 2ಎ ಮೀಸಲಾತಿ ಘೋಷಣೆ ಮಾಡಬೇಕು , ಇಲ್ಲದಿದ್ರೆ ಮುಂದೆ ಇದೆಯಲ್ಲ ಚುನಾವಣೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ..
ಗದಗದಲ್ಲಿ ಪಂಚಮಸಾಲಿ 2 ಮೀಸಲಾತಿ ಹಕ್ಕೊತ್ತಾಯ ಸಮಾವೇಶದಲ್ಲಿ ಮಾತನಾಡಿರುವ ಶಾಸಕರು ಇದು ನಮ್ಮ ಕೊನೆ ಹೋರಾಟ. ಒಂದು ಹಂತಕ್ಕೆ ಬಂದೀವಿ..
ಇನ್ನು ಮುಂದೆ ಏನೂ ಆಗೋದಿಲ್ಲ, ಮಾಡಬೇಕು ಬಸವರಾಜ್ ಬೊಮ್ಮಾಯಿ ಅವ್ರು.. ಮಾಡದಿದ್ದರೆ ಅನುಭವಿಸಬೇಕು, ಮತ್ತೇನೋ ಉಳಿದಿಲ್ಲ ಎಂದಿದ್ದಾರೆ..
ಪದೇ ಪದೇ ಹೋಗೋದು ಮನವಿ ಪತ್ರ ಕೊಡೋದು, ಪ್ರಾಣ ಕೊಡೋದು ಸುಡಗಾಡ್ ಏನ್ನು ಕೋಡುವದಿಲ್ಲ..
19 ಕ್ಕೆ ಘೋಷಣೆ ಮಾಡಬೇಕು. 22 ಕ್ಕೆ ಸನ್ಮಾನಕ್ಕೆ ಬರಬೇಕು, ಬರೋದಿಲ್ಲ ಅಂದ್ರೆ ವಿಧಾನಸಭಾ ಚುನಾವಣೆ ಇದೆಯಿಲ್ಲಾ ಎಲ್ಲಿ ಹೋಗ್ತೀರಿ..
ಡಾ: ಬಿ ಆರ್ ಅಂಬೇಡ್ಕರ್ ಅವ್ರು ನಮಗೆ ದೊಡ್ಡ ಶಕ್ತಿ ಕೋಟ್ಟಿದ್ದಾರೆ. ಈ ದೇಶದ ಟಾಟಾಗೂ ಒಂದೆ ವೋಟ್, ಗುಡಿಸಿಲಿನಲ್ಲಿ ಇರೋವವನಿಗೆ ಒಂದೇ ವೋಟ್..
ವೋಟ್ ನಲ್ಲೆ ಏನ್ ಮಾಡ್ತಿವಿ ನಮಗೆ ಗೊತ್ತು ಎಂದು ಟಾಂಗ್ ಕೊಟ್ಟಿದ್ದಾರೆ.








