Gadag : 4 ನೇ ತರಗತಿ ವಿದ್ಯಾರ್ಥಿಯನ್ನ ಶಾಲಾ ಆವರಣದಲ್ಲಿ ಹೊಡೆದು ಕೊಂದ ಶಿಕ್ಷಕ….
4 ನೇ ತರಗತಿ ವಿದ್ಯಾರ್ಥಿ ಕೊಂದ ಶಿಕ್ಷಕ
ಅತಿಥಿ ಶಿಕ್ಷಕನ ಹುಚ್ಚಟಕ್ಕೆ ಬೆಚ್ಚಿದ ಮಕ್ಕಳು
ಬಾಲಕನಿಗೆ ಪಿಕಾಸೆಯಿಂದ ಹೊಡೆದು ಕೊಲೆ
ಸಹ ಶಿಕ್ಷಕರ ಮೇಲೂ ಮನಬಂದಂತೆ ಥಳಿತ
ಗದಗ ಜಿಲ್ಲೆಯ ನರಗುಂದ ಗದಗ ಜಿಲ್ಲೆಯ ನರಗುಂದ ಘಟನೆ
Gadag , guest teacher killed a boy in school
ಸರ್ಕಾರಿ ಶಾಲೆಯಲ್ಲಿ ಪಾಠ ಮಾಡಲೆಂದು ನಿಯೋಜನೆ ಮಾಡಲಾಗಿದ್ದ ಅತಿಥಿ ಶಿಕ್ಷನೊಬ್ಬ 4ನೇ ತರಗತಿ ವಿದ್ಯಾರ್ಥಿಯನ್ನು ಶಾಲಾ ಆವರಣದಲ್ಲಿಯೇ ಹೊಡೆದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಗದಗದ ನರಗುಂದ ಹದ್ಲಿ ಗ್ರಾಮದಲ್ಲಿ ನಡೆದಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ 10 ವರ್ಷದ ಭರತ್ ಮೃತಪಟ್ಟ ಬಾಲಕನಾಗಿದ್ದಾನೆ.
ಇದೇ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮುತ್ತಪ್ಪ ಹಡಗಲಿ ಎಂಬಾತ ವಿದ್ಯಾರ್ಥಿಯ ಮೇಲೆ ಗುದ್ದಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ಈ ವೇಳೆ ತಡೆಯಲು ಬಂದ ಇನ್ನೋರ್ವ ಅತಿಥಿ ಶಿಕ್ಷಕಿ ಗೀತಾ ಬಾರಕೇರಿ ಅವರ ಮೇಲೂ ಮನಬಂದಂತೆ ಹಲ್ಲೆ ಮಾಡಿದ್ದಾನೆ.
ಆದರೆ, ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವಗೊಂಡ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಹಲ್ಲೆ ಮಾಡುವುದನ್ನು ಬಿಡಿಸಲು ಹೋದ ಸರ್ಕಾರಿ ಶಾಲೆಯ ಸಹ ಶಿಕ್ಷಕನ ಮೇಲೂ ಹಲ್ಲೆ ಮಾಡಿದ್ದಾನೆ.
ವಿಷಯ ತಿಳಿದು ಗ್ರಾಮಸ್ಥರು ಬಂದು ಅತಿಥಿ ಶಿಕ್ಷಕನನ್ನ ತಡೆದಿದ್ದಾರೆ.. ಕೂಡಲೇ ಆಂಬುಲೆನ್ಸ್ ಗೆ ಕರೆ ಮಾಡಿ ರಕ್ತದ ಮಡುವಿನಲ್ಲಿ ಸಾವನ್ನಪ್ಪಿದ ಬಾಲಕ ಮತ್ತು ತೀವ್ರ ಗಾಯಗೊಂಡಿರುವ ಅತಿಥಿ ಶಿಕ್ಷಕಿಯರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.