Pathaan : ಕೇಸರಿ ವಿವಾದ ಾಯ್ತು ಈಗ ‘ಪಠಾಣ್’ ಹೆಸರಿಗೆ ವಿರೋಧ ಶುರು..!!!
ಮೊದಲೇ ಕೇಸರಿ ಬಿಕಿನಿ ವಿವಾದದಲ್ಲಿ ಸಿಲುಕಿರುವ ಶಾರುಖ್ ಖಾನ್ , ದೀಪಿಕಾ ಪಡುಮಕೋಣೆ ನಟನೆಯ ಪಠಾಣ್ ಸಿನಿಮಾಗೆ ಇದೀಗ ಟೈಟಲ್ ಕಂಟಕ ಶುರುವಾಗಿದೆ..
ಹೌದು..!
ಈ ಟೈಟಲ್ ಇಡುವ ಮೂಲಕ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಕೂಡಲೇ ಈ ಶೀರ್ಷಿಕೆಯನ್ನು ಬದಲಾಯಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮುಸ್ಲಿಂ ಸಮುದಾಯದಲ್ಲಿ ಪಠಾಣರು ಎಂದರೆ ಗೌರವದಿಂದ ಇರುವವರು ಎಂದರ್ಥ. ಆದರೆ, ಈ ಸಿನಿಮಾದಲ್ಲಿ ಅದನ್ನು ಬೇರೆ ರೀತಿಯಲ್ಲಿ ಬಿಂಬಿಸುವ ಯತ್ನ ಮಾಡಲಾಗಿದೆ. ಕೂಡಲೇ ಶೀರ್ಷಿಕೆಯನ್ನು ಬದಲಾಯಿಸಿ ಎಂದು ಹಲವು ಮುಸ್ಲಿಂ ಸಂಘಟನೆಗಳು ಒತ್ತಾಯಿಸಿವೆ.
ಅಂದ್ಹಾಗೆ ಈಗಾಗಲೇ ಪಠಾಣ್ ಸಿನಿಮಾ ಬಾಯ್ಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದಾರೆ ಎನ್ನುವುದು ಒಂದು ಕಡೆಯಾದರೆ, ಈ ಬಿಕಿನಿ ತೊಟ್ಟ ಸಂದರ್ಭದಲ್ಲಿ ಬರುವ ಹಾಡೊಂದರ ಸಾಹಿತ್ಯ ನಾಚಿಕೆ ಇಲ್ಲದ ಬಣ್ಣ ( Besharam Rang ) ಎನ್ನುವುದಾಗಿದೆ. ಇದು ಹಿಂದೂಗಳನ್ನು ಹೀಯಾಳಿಸುವ ಉದ್ದೇಶದಿಂದಲೇ ಮಾಡಿದ ಕೃತ್ಯ ಎಂದು ಹೇಳಲಾಗುತ್ತಿದೆ. ಹಾಗಾಗಿ ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎಂಬ ಕೂಗೆದ್ದಿದೆ.
ಜೊತೆಗೆ ಶಾರುಖ್ ಹೂಗೂ ದೀಪಿಕಾ ಪರ ಕೂಡ ಅನೇಕರು ಮಾತನಾಡ್ತಿದ್ದಾರೆ..