WhatsApp : ಡಿಲಿಟ್ ಮಾಡಿದ ಸಂದೇಶ ಮರುಪಡೆಯುವ ಹೊಸ ಫೀಚರ್ ರಿಲೀಸ್…
ಮೆಟಾ ಒಡೆತನದ ವಾಟ್ಸಪ್ ಕಳೆದ ವರ್ಷದ ಡಿಲಿಟ್ ಫಾರ್ ಎವೆರಿವನ್ ಎಂಬ ಹೊಸ ಫೀಚರ್ ಅನ್ನ ಪರಿಚಯಿಸಿತ್ತು. ಈ ಫೀಚರ್ ನಲ್ಲಿ ಸಂದೇಶ ಕಳುಹಿಸಿದ ಮೇಲೆ ತಾವು ಸೇರಿದಂತೆ ಸ್ವೀಕರಿಸಿದವರ ಸಂದೇಶವನ್ನ ಅಳಿಸುವಂತಹ ಅವಕಾಶ ಕಲ್ಪಿಸಿತ್ತು.
ಪ್ರಸ್ತುತ ಆಯ್ಕೆಯಲ್ಲಿ ಎರಡು ಆಪ್ಶನ್ ನೀಡಲಾಗಿತ್ತು. ಒಂದು ಡಿಲಿಟ್ ಫಾರ್ ಮಿ ಇನ್ನೊಂದು ಡಿಲಿಟ್ ಫಾರ್ ಆದರೇ ಕೆಲವೊಮ್ಮೆ ಎಲ್ಲರಿಗಾಗಿ ಅಳಿಸುವ ಬದಲು ನನಗಾಗಿ ಅಳಿಸುವ ಆಪ್ಶನ್ ಕ್ಲಿಕ್ ಮಾಡಿಬಿಟ್ಟರೇ ಮತ್ತೆ ಸಂದೇಶ ಸ್ವೀಕರಿಸಿದವರ ಮೆಸೆಜ್ ಡಿಲಿಟ್ ಮಾಡುವ ಅವಕಾಶ ಇರಲಿಲ್ಲ. ಹಾಗಾಗಿ ಈ ಸಮಸ್ಯೆಯನ್ನ ಹೋಗಲಾಡಿಸಲಿ ವಾಟ್ಸಪ್ ‘Acidental Delete’ ಎಂಬ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ.
ಹೊಸ WhatsApp ‘ಆಕ್ಸಿಡೆಂಟಲ್ ಡಿಲೀಟ್’ ಫೀಚರ್ ಮೂಲಕ ಐದು ಸೆಕೆಂಡ್ ಕಾಲಾವಕಾಶವನ್ನ ನೀಡಲಾಗಿದ್ದು, ಡಿಲಿಟ್ ಮಾಡಲಾದ ಸಂದೇಶವನ್ನ ಮರಳಿ ಪಡೆಯಬಹುದು.
ಆಪಲ್ ಐಫೋನ್‌ಗಳು ಮತ್ತು ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಗ್ರೂಪ್ ಅಥವಾ ವೈಯಕ್ತಿಕ ಚಾಟ್ ಗಳಲ್ಲಿ ಈ ಫೀಚರ್ ಕಾರ್ಯ ನಿರ್ವಹಿಸಲಿದೆ. ಆರಂಭದಲ್ಲಿ ‘ಡಿಲೀಟ್ ಫಾರ್ ಎವೆರಿವನ್’ ಫೀಚರ್ಸ ಅನ್ನ ಕೇವಲ 7 ನಿಮಿಷಗಳಿಗೆ ಸೀಮಿತ ಮಾಡಲಾಗಿತ್ತು. ಈ ವರ್ಷದ ಆಗಸ್ಟ್‌ನಲ್ಲಿ ಇದನ್ನು 60 ಗಂಟೆಗೆ ಹೆಚ್ಚಿಸಲಾಗಿದೆ.
WhatsApp lets you undo ‘Delete for Me’ in case you hit that button too quickly








