lionel messi : ನೋ ಡೌಟ್…. ಹೀ ಈಸ್ ಗ್ರೇಟ್ ಆಫ್ ಆಲ್ ಟೈಮ್ …
ಫುಟ್ವಾಲ್ ವಿಶ್ವಕಪ್ ಮುಗಿದೆದೆ. ಯಾರು ಗೋಟ್ (ಗ್ರೇಟ್ ಆಫ್ ಆಲ್ ಟೈಮ್) ಎನ್ನವ ಪ್ರಶ್ನೆಗೂ ಉತ್ತರ ಸಿಕ್ಕಿದೆ. “ಲಿಯೋನೆಲ್ ಮೆಸ್ಸಿ” ಸದ್ಯದ ಪುಟ್ಬಾಲ್ ಸಾಮ್ರಾಟ. ಅರ್ಜೆಂಟೀನಾದ ಸ್ಟಾರ್ ಆಟಗಾರ ತಮ್ಮ ಎರಡು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಹಲವು ಮಜಲುಗಳನ್ನ ಕಂಡಿದ್ದಾರೆ.
ಫುಟ್‌ಬಾಲ್ ನ ದಂತ ಕಥೆಗಳಾದ ಪೀಲೆ ಮತ್ತು ಮರಡೋನಾ ಅವರಿಗೆ ಸಿಕ್ಕ ಮನ್ನಣೆ ಎಲ್ಲಿ ಮೆಸ್ಸಿ ಕಳೆದುಕೊಳ್ಳುತ್ತಾರೋ ಎನ್ನುವ ಭಯವಿತ್ತು. ಕಾರಣ ಮೆಸ್ಸಿ ಅನೇಕ ಪಂದ್ಯವಳಿಗಳನ್ನ ಗೆದ್ದಿದ್ದರಾದರೂ ವಿಶ್ವಕಪ್ ಇಲ್ಲದೆ ಪರಿಪೂರ್ಣವಾಗಿರಲಿಲ್ಲ. ಆ ಆಸೆ ಈಡೇರದೆಯೇ ಮೆಸ್ಸಿ (35) ಆಟಕ್ಕೆ ವಿದಾಯ ಹೇಳುವರೇ ? ಎಂಬ ಭಯ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ, ಕತಾರ್‌ನಲ್ಲಿ ನಡೆದ ಪೈನಲ್ ನಲ್ಲಿ ಅರ್ಜೆಂಟೀನಾ ಗೆಲುವು ಸಾಧಿಸುವುದರೊಂದಿಗೆ ಮೆಸ್ಸಿ ಅವರ ಬಹುದಿನಗಳ ಕನಸು ನನಸಾಗಿದೆ.
ವಿಶ್ವಕಪ್ ಗೆದ್ದ ಮೆಸ್ಸಿ ಆಧುನಿಕ ಫುಟ್‌ಬಾಲ್‌ನಲ್ಲಿ ಪರಿಪೂರ್ಣ ಅಧ್ಯಾಯವನ್ನೇ ಬರೆದಿದ್ದಾರೆ. ಈ ಮೆಗಾ ಟ್ರೋಫಿಯೊಂದಿಗೆ ಮೆಸ್ಸಿ ಎಷ್ಟು ಶ್ರೇಷ್ಠ ? ಎಂಬ ಚರ್ಚೆ ಗೆ ವಿರಾಮು ಹಾಕಲಾಗಿದೆ. ಸುಮಾರು 20 ವರ್ಷಗಳ ವೃತ್ತಿಜೀವನದಲ್ಲಿ 37 ಟ್ರೋಫಿಗಳನ್ನು ಗೆದ್ದಿರುವ ಮೆಸ್ಸಿ, 7 ಬ್ಯಾಲನ್ ಡಿ’ಓರ್ ಪ್ರಶಸ್ತಿಗಳನ್ನು ಮತ್ತು 6 ಬಾರಿ ಯುರೋಪಿಯನ್ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕೋಪಾ ಅಮೇರಿಕಾ ಕಪ್ ಪ್ರಶಸ್ತಿಯ ಜೊತೆಗೆ ಒಲಿಂಪಿಕ್ ಚಿನ್ನವನ್ನು ಗೆದ್ದಿದ್ದಾರೆ. ಇದೀಗ ಅರ್ಜೆಂಟೀನಾ ತಂಡವನ್ನು ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿಸಿದ ಮೆಸ್ಸಿ ತಮ್ಮ ವೃತ್ತಿ ಜೀವನಕ್ಕೆ ಭರ್ಜರಿ ವಿದಾಯ ಹೇಳಿದ್ದಾರೆ.
ವಿಶ್ವಕಪ್ ಗೆದ್ದ ನಂತರ ಮೆಸ್ಸಿ ವೃತ್ತಿ ಜೀವನಕ್ಕೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿ ಇದುವರೆಗೆ ಕೇಳಿಬಂದಿತ್ತು. ಆದರೆ, ವಿಶ್ವಕಪ್ ಫೈನಲ್ ಗೆದ್ದ ನಂತರ ಮೆಸ್ಸಿ ಅವರು ಅರ್ಜೆಂಟೀನಾ ಪರ ಇನ್ನೂ ಕೆಲವು ವರ್ಷಗಳ ಕಾಲ ಆಡಲು ಬಯಸುವುದಾಗಿ ಹೇಳಿದ್ದಾರೆ. ವಿಶ್ವ ಚಾಂಪಿಯನ್ ಆಗಿ ಇನ್ನೂ ಕೆಲವು ಪಂದ್ಯಗಳನ್ನು ಆಡುವ ಆಸೆ ಇದೆ ಎಂದು ಹೇಳಿದ್ದಾರೆ. ನನ್ನ ವೃತ್ತಿಜೀವನದಲ್ಲಿ ನನಗೆ ಸಿಗದ ಏಕೈಕ ವಿಷಯವೆಂದರೆ ವಿಶ್ವಕಪ್. ಈಗಾಗಲೇ ಕೋಪಾ ಅಮೆರಿಕ ಪ್ರಶಸ್ತಿ ಗೆದ್ದಿದೆ. ಈಗ ವಿಶ್ವಕಪ್ಪ ಅವರ ಜೊತೆ ನನ್ನ ಕನಸು ನನಸಾಗಿದೆ. ನನಗೆ ಇನ್ನು ಏನೂ ಬೇಡ. ಹೀಗಾಗಿ ಚಾಂಪಿಯನ್ ಆಗಿ ಇನ್ನೂ ಕೆಲವು ದಿನಗಳ ಕಾಲ ನನ್ನ ರಾಷ್ಟ್ರೀಯ ತಂಡದಲ್ಲಿ ಆಡುವ ಆಸೆ ಇದೆ’ ಎಂದು ಮೆಸ್ಸಿ ಹೇಳಿದ್ದಾರೆ.
lionel messi : no doubt…. He is the greatest of all time…