IPL 2023 Auction : ಸ್ಯಾಮ್ ಕರನ್ ಮೇಲೆ ಕನಕ ವರ್ಷ ಸುರಿಸಿದ ಪಂಜಾಬ್ಸ್ ಕಿಂಗ್….
IPL 2023 ಕ್ಕಾಗಿ ನಡೆದ ಹರಾಜು ಪ್ರಕ್ರಿಯೆ ನಿನ್ನೆ ಕೊಚ್ಚಿಯಲ್ಲಿ ಮುಕ್ತಾಯವಾಗಿದೆ. 24 ವರ್ಷದ ಇಂಗ್ಲೆಂಡ್ ಆಲ್ ರೌಂಡರ್ ಸ್ಯಾಮ್ ಕರನ್ IPL ಇತಿಹಾಸದಲ್ಲೇ ಅತಿ ದುಬಾರಿ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಇಲ್ಲಿಯವರೆಗೆ ಕ್ರೀಸ್ ಮೋರಿಸ್ ಹೆಸರಿನಲ್ಲಿದ್ದ ದಾಖಲೆಯನ್ನ ಸ್ಯಾಮ್ ಕರನ್ ಅಳಿಸಿ ಹಾಕಿದ್ದಾರೆ.
2 ಕೋಟಿ ಮೂಲ ಬೆಲೆಯ ಬಿಡ್ ಗೆ ಆಕಾಶವೇ ಮಿತಿ ಎನ್ನುವಂತೆ 18.50 ಕೋಟಿಗೆ ಬಂದು ನಿಂತಿತು. ಪಂಜಾಬ್ ಕಿಂಗ್ಸ್ ಈ ಆಟಗಾರನನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಈ ಮೂಲಕ ಕ್ರಿಸ್ ಮೋರಿಸ್ (16.25 ಕೋಟಿ ) ದಾಖಲೆಯನ್ನ ಅಳಿಸಿ ಹಾಕಿದ್ದಾರೆ.
ಉಳಿದಂತೆ ಆಸ್ಟ್ರೇಲಿಯ ಆಟಗಾರ ಕೆಮರೂನ್ ಗ್ರೀನ್ 17.5 ಕೋಟಿ ಮೊತ್ತಕ್ಕೆ ಮುಂಬೈ ಇಂಡಿಯನ್ಸ್ ಪಾಲಾದರೆ. ಇಂಗ್ಲೆಂಡ್‌ನ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ 16.25 ಕೋಟಿ ಮೊತ್ತ ಪಡೆಯುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಮಡಿಲು ಸೇರಿದರು. ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ 16 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದರೆ. ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ 13.25 ಕೋಟಿ ಮೊತ್ತದೊಂದಿಗೆ ಸನ್‌ರೈಸರ್ಸ್ ಹೈದ್ರಾಬಾದ್ ಸೇರಿಕೊಂಡರು.
ಅಧಿಕ ಮೊತ್ತಕ್ಕೆ ಸೇಲ್ ಆದ ಆಟಗಾರರು ಹೀಗಿದ್ದಾರೆ.
ಸ್ಯಾಮ್ ಕರ್ರಾನ್ ರೂ.18.50 ಕೋಟಿ ಪಂಜಾಬ್
ಕ್ಯಾಮರೂನ್ ಗ್ರೀನ್ ರೂ.17.50 ಕೋಟಿ ಮುಂಬೈ
ಬೆನ್ ಸ್ಟೋಕ್ಸ್ ರೂ.16.25 ಕೋಟಿ ಚೆನ್ನೈ
ನಿಕೋಲಸ್ ಪೂರನ್ ರೂ.16 ಕೋಟಿ ಲಕ್ನೋ
ಹ್ಯಾರಿ ಬ್ರೂಕ್ ರೂ.13.25 ಕೋಟಿ ಹೈದರಾಬಾದ್
ಮಯಾಂಕ್ ಅಗರ್ವಾಲ್ ರೂ.8.25 ಕೋಟಿ ಹೈದರಾಬಾದ್
ಶಿವಂ ಮಾವಿ ರೂ.6 ಕೋಟಿ ಗುಜರಾತ್
IPL 2023 Auction : Punjab Kings make highest ever purchase in IPL history Sam Curran…








