Krishna Janmabhoomi : ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ಮಥುರಾ ಕೋರ್ಟ್ ಆದೇಶ….
ಮಥುರಾ: ಉತ್ತರ ಪ್ರದೇಶದ ಮಥುರಾದಲ್ಲಿರುವ ಶ್ರೀ ಕೃಷ್ಣ ಜನ್ಮಭೂಮಿ -ಶಾಹಿ ಈದ್ಗಾದ ವಿವಾದಿತ ಸ್ಥಳದ ಸಮೀಕ್ಷೆ ನಡೆಸುವಂತೆ ಮಥುರಾ ನ್ಯಾಯಾಲಯ ಶನಿವಾರ ಆದೇಶಿಸಿದೆ.
ಹಿಂದೂ ಸೇನೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಿರಿಯ ವಿಭಾಗೀಯ ನ್ಯಾಯಾಲಯ ಪ್ರಕರಣದ ಎಲ್ಲ ಕಕ್ಷಿದಾರರಿಗೆ ನೋಟಿಸ್ ಜಾರಿ ಮಾಡಿ ನ್ಯಾಯಾಲಯದ ಆದೇಶಗಳನ್ನು ಪಾಲಿಸುವಂತೆ ಮನವಿ ಮಾಡಿದೆ.
ಶ್ರೀಕೃಷ್ಣ ಜನ್ಮಸ್ಥಾನಂ-ಶಾಹಿ ಈದ್ಗಾ ಮಸೀದಿಯ ವಿವಾದಿತ ಸ್ಥಳದಲ್ಲಿ ಹಿಂದೂ ಸೇನೆಯ ಹಕ್ಕು ಕುರಿತು ತೀರ್ಪು ನೀಡಿದ ಕೋರ್ಟ್ ಜನವರಿ 2 ರ ನಂತರ ಸಮೀಕ್ಷೆ ನಡೆಸಿ ಸಮೀಕ್ಷಾ ವರದಿಯನ್ನು ಜನವರಿ 20ರಂದು ಸಲ್ಲಿಸುವಂತೆ ಆದೇಶಿಸಿದೆ.
ಮೊಘಲ್ ಚಕ್ರವರ್ತಿ ಔರಂಗಜೇಬ್ ಭಗವಾನ್ ಕೃಷ್ಣನ ಜನ್ಮಸ್ಥಳಕ್ಕೆ ಸೇರಿದ 13.37 ಎಕರೆ ಭೂಮಿಯಲ್ಲಿದ್ದ ದೇವಾಲಯವನ್ನು ಕೆಡವಿ ಅದರಲ್ಲಿ ಈದ್ಗಾವನ್ನು ನಿರ್ಮಿಸಿದರು ಎಂದು ಹಿಂದೂ ಸೇನೆ ಪ್ರತಿಪಾದಿಸಿದೆ.







