Main Atal Hoon : ವಾಜಪೇಯಿ ಅವರ ಬಯೋಪಿಕ್ ಸಿನಿಮಾದ ಲುಕ್ಸ್..!!
ಮಾಜಿ ಪ್ರಧಾನಿ ಭಾರತ ಕಂಡ ಧೀಮಂತ , ಶ್ರೇಷ್ಠ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಅವರ ಜಯಂತಿ ಹಿನ್ನೆಲೆ ಅವರ ಜೀವನಾಧಾರಿತ ಸಿನಿಮಾ ‘ಮೇ ಹೂ ಅಟಲ್’ ನ ಫಸ್ಟ್ ಲುಕ್ ರಿವೀಲ್ ಮಾಡಲಾಗಿದೆ..
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜಯಂತಿ ಪ್ರಯುಕ್ತ ಮೇ ಅಟಲ್ ಹೂಂ ಚಿತ್ರತಂಡದಿಂದ ಫಸ್ಟ್ ಲುಕ್ ರಿಲೀಸ್ ಆಗಿದೆ.
ಪಂಕಜ್ ತ್ರಿಪಾಠಿ ಈ ಚಿತ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು , ಈ ಸಿನಿಮಾದ ಲುಕ್ಸ್ ಸಖತ್ ಗಮನ ಸೆಳೆಯುತ್ತಿದೆ..
ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ನಿರ್ದೇಶಕ ರವಿ ಜಾಧವ್ ಅವರು ಈ ಸಿನಿಮಾದ ನಿರ್ದೇಶನ ಮಾಡ್ತಿದ್ದಾರೆ.. ಉತ್ಕರ್ಷ್ ನೈಥನಿ ಕಥೆ ಬರೆದಿದ್ದಾರೆ.
ಅಂದ್ಹಾಗೆ 2023ರರ ಡಿಸೆಂಬರ್ ನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ ಎಂದು ಕೂಡ ಚಿತ್ರತಂಡ ಘೋಷಿಸಿದೆ.