ಅಮೆರಿಕದ ಫೆಡರಲ್ ಸರ್ಕೀಟ್ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಶ್ರೀನಿವಾಸನ್ ನೇಮಕ
ಅಮೆರಿಕದ ಫೆಡರಲ್ ಸರ್ಕೀಟ್ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಭಾರತ ಮೂಲದ ಶ್ರೀನಿವಾಸನ್ ನೇಮಕಗೊಂಡಿದ್ದಾರೆ. ಫೆಡರಲ್ ಸರ್ಕೀಟ್ ಕೋರ್ಟ್ ಅನ್ನು ಅಮೆರಿಕದ ಸುಪ್ರೀಂ ಕೋರ್ಟ್ ನಂತರದ ಪ್ರಬಲ ನ್ಯಾಯಾಲಯವೆಂದು ಪರಿಗಣಿಸಲಾಗಿದೆ. ಅಮೆರಿಕದ ಅಪೀಲುಗಳ ಡಿಸಿ ಸರ್ಕೀಟ್ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿರುವ 52 ವರ್ಷದ ಶ್ರೀನಿವಾಸನ್ ಅಮೆರಿಕದ ನ್ಯಾಯಾಲಯಗಳಲ್ಲಿ ದೊಡ್ಡ ಹುದ್ದೆ ಅಲಂಕರಿಸಿದ ಭಾರತ ಮೂಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಫೆಬ್ರುವರಿ 12 ರಂದು ಡಿಸಿ ಫೆಡರಲ್ ಸರ್ಕೀಟ್ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿರುವ ಶ್ರೀನಿವಾಸನ್ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಈಗಾಗಲೇ ಎರಡು ಬಾರಿ ಪರಿಗಣಿಸಲ್ಪಟ್ಟಿದ್ದರು.








