ಛೂ ಮಂತರ್ ಮೂಲಕ ಮತ್ತೆ ಒಂದಾದ ಅಧ್ಯಕ್ಷ ಜೋಡಿ…
ಶರಣ್ ಕಾಮಿಡಿಗೆ ಮಾಸ್ಟರ್ ಇನ್ನೂ ಚಿಕ್ಕಣ್ಣ…. ಚಿಕ್ಕಣ್ಣ ಸ್ಕ್ರೀನ್ ಮೇಲೆ ಇರೋ ತನಕ ನಗುವಿಗೆ ಕೊರತೆ ಇರಲ್ಲ.. ಕಾಮಿಡಿಗೆ ಅಧ್ಯಕ್ಷ ನಮ್ಮ ಚಿಕ್ಕಣ್ಣ.. ಇನ್ನೂ ಇವರಿಬ್ಬರೂ ಒಂದೇ ಸಿನಿಮಾದಲ್ಲಿದ್ದಾರೆ ಅಂದ್ರೆ ಆ ಕ್ರೇಜೇ ಬೇರೆ ಲೆವೆಲ್.. ಅಧ್ಯಕ್ಷ ಸಿನಿಮಾದಲ್ಲಿ ಮೋಡಿ ಮಾಡಿದ್ದ ಈ ಕಾಮಿಡಿ ಕಿಲಾಡಿಗಳು ಇದೀಗ ‘ಛೂಮಂತರ್’ ಸಿನಿಮಾ ಮೂಲಕ ಮತ್ತೆ ನಗಿಸೋದಕ್ಕೆ ಬರ್ತಿದ್ದಾರೆ.
ನಗಿಸೋದಷ್ಟೇ ಅಲ್ಲ.. ಈ ಸಿನಿಮಾದ ಮೂಲಕ ಜನರಿಗೆ ಭಯ ಹುಟ್ಟಿಸೋಕೆ ರೆಡಿಯಾಗಿದ್ದಾರೆ.. ಈ ಸಿನಿಮಾದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಆಗಿ ಸಖತ್ ಗಮನ ಸೆಳೆಯುತ್ತಿದೆ..
ಕರ್ವ ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಕಟ್ಟಿಕೊಟ್ಟಿದ್ದ ನವನೀತ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ‘ಛೂ ಮಂತರ್’ ಚಿತ್ರಕ್ಕೆ ತರುಣ್ ಶಿವಪ್ಪ ಬಂಡವಾಳ ಹೂಡಿದ್ದು ಇದು ಅವರ ಬ್ಯಾನರ್ನ 5ನೇ ಸಿನಿಮಾ ಎನ್ನುವುದು ವಿಶೇಷ. ಈ ಹಾರರ್ ಕಾಮಿಡಿ ಚಿತ್ರವನ್ನು ಅನೂಪ್ ಕಟ್ಟುಕರನ್ ಸೆರೆ ಹಿಡಿದಿದ್ದಾರೆ. ವೆಂಕಿ ಸಂಕಲನ, ರವಿವರ್ಮಾ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಹಾರರ್ ಜೊತೆಗೆ ಕಾಮಿಡಿ ಸೇರಿಸಿ ಬಹಳ ಮಜವಾಗಿ ಸಿನಿಮಾ ಕಟ್ಟಿಕೊಡಲಾಗಿದೆ. ಈಗಾಗಲೇ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು ಹಾಡುಗಳ ಚಿತ್ರೀಕರಣ ನಡೀತಿದೆ.
ಒಂದು ಬೂತ ಬಂಗಲೆ. ಆ ಬಂಗಲೆಯಲ್ಲಿ ಎದುರಾಗುವ ಸಮಸ್ಯೆಗಳ ಸುತ್ತಾ ಈ ಸಿನಿಮಾ ಸುತ್ತುತ್ತದೆ ಎನ್ನುವುದು ಮೋಷನ್ ಪೋಸ್ಟರ್ನಲ್ಲಿ ಅರ್ಥವಾಗ್ತಿದೆ. ಚಿತ್ರದಲ್ಲಿ ಪ್ರಭು ಮುಂಡ್ಕರ್, ರಜಿನಿಕಾ ಭಾರಧ್ವಜ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಮೈಸೂರು, ಉತ್ತರಕಾಂಡ, ಬೆಂಗಳೂರು ಹಾಗೂ ಲಂಡನ್ನಲ್ಲಿ ‘ಛೂ ಮಂತರ್’ ಸಿನಿಮಾ ಚಿತ್ರೀಕರಣ ನಡೆದಿದೆ. ಶೀಘ್ರದಲ್ಲೇ ತೆರೆಗೆ ಬರಲಿದೆ.
Sharan and chikkanna again join the hands for choo manthar movie








