IND vs SRI : ಗಾಯಗೊಂಡಿದ್ದಾರಾ..?? ನಾಯಕ ಹಾರ್ದಿಕ್..!!
ಟೀಮ್ ಇಂಡಿಯಾದ ನೂತನ ನಾಯಕ ಹಾರ್ದಿಕ್ ಪಾಂಡ್ಯ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದ ವೇಳೆ ಗಾಯಗೊಂಡವರೆಂತೆ ಕಂಡು ಬಂದರು.
ಮೂರನೆ ಓವರ್ ಬೌಲಿಂಗ್ ಮಾಡುವ ವೇಳೆ ಹಾರ್ದಿಕ್ ಪಾಂಡ್ಯ ಆಗಾಗ ಬೆನ್ನು ಮುಟ್ಟಿಕೊಳ್ಳುತ್ತಿದ್ದರು.
2019ರ ಏಷ್ಯಾಕಪ್ ವೇಳೆ ಹೊರ ನೆಡೆದಿದ್ದ ಘಟನೆಯನ್ನು ನೆನಪಿಸುತ್ತಿತ್ತು.
ಪಂದ್ಯ ಮುಗಿದ ಬಳಿಕ ಪ್ರತಿಕ್ರಿಯಿಸಿದ ಹಾರ್ದಿಕ್ ಪಾಂಡ್ಯ, ನನಗೆ ಜನರನ್ನು ಎದುರಿಸುವ ಪ್ರವೃತ್ತಿ ಇದೆ ಎಂದು ನಗೆ ಚಟಾಕಿ ಹಾರಿಸಿದರು.ನಾನು ಖುಷಿಯಿಂದ ಇದ್ದರೆ ಎಲ್ಲವೂ ಚೆನ್ನಾಗಿ ಎಂದು ಅರ್ಥ. ನಾನು ಒಳ್ಳೆಯ ನಿದ್ದೆ ಮಾಡಿರಲಿಲ್ಲ.ಆ ಸಮಯದಲ್ಲಿ ಸಾಕಷ್ಟು ಕುಡಿದಿರಲಿಲ್ಲ ಎಂದು ಹೇಳಿದ್ದಾರೆ.
ಅಕ್ಸರ್ ಪಟೇಲ್ಗೆ ಕೊನೆಯ ಓವರ್ ಕೊಟ್ಟಿರುವ ಕುರಿತು. ತಂಡಕ್ಕೆ ಕಠಿಣ ಸಂದರ್ಭಗಳನ್ನು ಕೊಡಬೇಕು. ಅಗ ಮಾತ್ರ ದೊಡ್ಡ ಪಂದ್ಯಗಳಲ್ಲಿ ಯಶಸ್ಸು ಕಾಣಲು ಸಾಧ್ಯವೆಂದರು.
ಯುವ ಆಟಗಾರರು ಸಂರ್ಭಕ್ಕೆ ತಕ್ಕಂತೆ ಸ್ಪೋಟಗೊಂಡರು.ಸೋಲಿನ ಬಗ್ಗೆ ಭಯ ಬೇಡ ಎಂದು ತಂಡದ ಯುವ ಆಟಗಾರರಿಗೆ ಕಿವಿ ಮಾತು ಹೇಳಿದರು.








