Project – K : ಚಿತ್ರದಿಂದ ನಟಿ ದೀಪಿಕಾ ಪಡುಕೋಣೆ ಫಸ್ಟ್ ಲುಕ್ ಬಿಡುಗಡೆ…
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ‘ಪ್ರಾಜೆಕ್ಟ್-ಕೆ’ ಚಿತ್ರತಂಡ ನಟಿ ದೀಪಿಕ ಪಡುಕೋಣೆಯ ಫಸ್ಟ್ ಲುಕ್ ಅನಾವರಣ ಮಾಡಿದೆ. ನಟಿ ದೀಪಿಕಾ ಜನ್ಮ ದಿನಕ್ಕೆ ಚಿತ್ರತಂಡ ಚಿತ್ರ ತಂಡ ಲುಕ್ ಬಿಡುಗಡೆ ಮಾಡಿ ವಿಶ್ ಮಾಡಿದೆ.
ಪ್ರಾಜೆಕ್ಟ್ ಕೆ ಚಿತ್ರವನ್ನ ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದು ವೈ ಜಯಂತಿ ಬ್ಯಾನರ್ ಅಡಿಯಲ್ಲಿ ಸಿ ಅಶ್ವನಿ ದತ್ ಮಹತ್ವಾಕಾಂಕ್ಷೆಯಿಂದ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಇಂದು ದೀಪಿಕಾ ಹುಟ್ಟುಹಬ್ಬದ ಕಾರಣ ಪ್ರಾಜೆಕ್ಟ್-ಕೆ ತಂಡ ಸಣ್ಣ ಅಪ್‌ಡೇಟ್ ನೀಡಿದೆ. ಅಲ್ಲದೇ ಪೋಸ್ಟರ್ ನಲ್ಲಿ ‘ಶೀ ಈಸ್ ಎ ಹೋಪ್ ಇನ್ ದಿ ಡಾರ್ಕ್’ ಎಂದು ಕ್ಯಾಪ್ಶನ್ ನೀಡಲಾಗಿದೆ.
ಸುಮಾರು 500 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ದಿಶಾ ಪಟಾನಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಿಕ್ಕಿ ಜೆ ಮೇಯರ್ ಸಂಗೀತ ನೀಡುತ್ತಿದ್ದಾರೆ.
Project – K : Actress Deepika Padukone first look released …







