Plane Crash : ಮಂಜಿನಿಂದಾಗಿ ದೇವಸ್ಥಾನದ ಅಪ್ಪಳಿಸಿದ ತರಬೇತಿ ವಿಮಾನ – ಪೈಲೆಟ್ ಸಾವು…
ಮಧ್ಯಪ್ರದೇಶದಲ್ಲಿ ವಿಮಾನ ದುರಂತ ಸಂಭವಿಸಿದೆ. ತರಬೇತಿ ಪಡೆಯುತ್ತಿದ್ದ ವಿಮಾನವೊಂದು ದೇವಸ್ಥಾನದ ಮೇಲ್ಚಾವಣಿಗೆ ಅಪ್ಪಳಿಸಿದ ಪರಿಣಾಮ ಪೈಲಂಟ್ ಮೃತಪಟ್ಟಿರುವ ಘಟನೆ ರೇವಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಟ್ರೈನಿ ಪೈಲೆಟ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ರೇವಾ ಜಿಲ್ಲೆಯ ಉಮ್ರಿ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಫಾಲ್ಕನ್ ಏವಿಯೇಷನ್ ಅಕಾಡೆಮಿಯ ಟ್ರೈನಿ ವಿಮಾನದಲ್ಲಿ ಪೈಲಟ್ ವಿಮಲ್ ಕುಮಾರ್ ಮತ್ತು ಟ್ರೈನಿ ಪೈಲಟ್ ಸೋನು ಯಾದವ್ ಒಟ್ಟಿಗೆ ಪ್ರಯಾಣಿಸುತ್ತಿದ್ದರು.
ರಾತ್ರಿ 11.30ರ ಸುಮಾರಿಗೆ ದೇವಸ್ಥಾನದ ಗುಮ್ಮಟಕ್ಕೆ ವಿಮಾನ ಡಿಕ್ಕಿ ಹೊಡೆದು ಪತನಗೊಂಡಿದೆ. ರಾತ್ರಿ ಭಾರೀ ಮಂಜಿನಿಂದಾಗಿ ದೇವಾಲಯದ ಮೇಲ್ಭಾಗ ಪೈಲಟ್‌ಗಳಿಗೆ ಕಾಣಿಸಿಲ್ಲ. ದೇವಸ್ಥಾನದ ಗುಮ್ಮಟದ ಭಾಗ ಎತ್ತರವಾಗಿದ್ದು, ವಿಮಾನ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಪೈಲಟ್ ವಿಮಲ್ ಅಲ್ಲೇ ಸಾವನ್ನಪ್ಪಿದ್ದಾರೆ. ಟ್ರೈನಿ ಪೈಲಟ್ ಗಾಯಗೊಂಡಿದ್ದಾರೆ.
ಅಪಘಾತ ಸಂಭವಿಸಿದ ಕೂಡಲೇ ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಗಾಯಗೊಂಡಿರುವ ಟ್ರೈನಿ ಪೈಲಟ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಮಾನಯಾನ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Plane Crash: A training plane crashed into a temple due to fog – the pilot died…