Rocking star yash : ಹುಟ್ಟು ಹಬ್ಬಕ್ಕೂ ಮುನ್ನ ಅಭಿಮಾನಿಗಳಿಗೆ ಪತ್ರ ಬರೆದ ನಟ ಯಶ್….
ಜನವರಿ 7 ರಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ. ಕೆಜಿಎಫ್ ನಂತರ ರಾಕಿಬಾಯ್ ಕ್ರೇಜ್ ಹೆಚ್ಚಾಗಿದ್ದು ದೇಶದ ಮೂಲೆ ಮೂಲೆಯಲ್ಲು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.
ನೆಚ್ಚಿನ ಸ್ಟಾರ್ ನಟನನ್ನ ಬೇಟಿ ಆಗಿ ಯಶ್ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳಬೇಕು ಎಂದು ಪ್ಲಾನ್ ಮಾಡಿಕೊಂಡಿದ್ ಅಭಿನಾನಿಗಳಿಗೆ ನಿರಾಶೆಯಾಗಿದೆ. ಯಶ್ ಅವರು ತಮ್ಮ ಅಭಿಮಾನಿಗಳಿಗೊಂದು ಪ್ರೀತಿಯ ಪತ್ರ ಬರೆದಿದ್ದು , ನಾನು ಈ ಬಾರಿ ನಮ್ಮ ಜೊತೆಗಿರಲು ಸಾಧ್ಯವಿಲ್ಲ ದಯವಿಟ್ಟು ಕ್ಷಮಿಸಿ ಎಂದಿದ್ದಾರೆ..
ಯಶ್ ಬರೆದ ಪತ್ರದ ಸರಾಂಶ ಈ ರೀತಿ ಇದೆ…
“ ನಿಮ್ಮ ಕಲ್ಮಶವಿಲ್ಲದ ಪ್ರೀತಿ, ಸಾಟಿಯೇ ಇಲ್ಲದ ಅಭಿಮಾನ, ನನ್ನ ಹೃದಯ ತುಂಬುವಂತೆ ಮಾಡಿದೆ. ನನಗೆ ಗೊತ್ತು ನೀವೆಲ್ಲಾ ಕಾಯುತ್ತಿದ್ದೀರಾ. ಹುಟ್ಟಿದ ದಿನ ತುಂಬಾ ವಿಶೇಷ ಅಂತ ನನಗೆ ಅನ್ನಿಸೋಕೆ ಶುರುವಾಗಿದ್ದೆ ಇತ್ತೀಚಿನ ವರ್ಷಗಳಲ್ಲಿ. ಯಾವಾಗ ನೀವು ನನ್ನ ದಿನವನ್ನ ನಿಮ್ಮ ದಿನವನ್ನಾಗಿಸಿಕೊಂಡು ಆಚರಿಸಿ ವಿಜೃಂಭಿಸೋಕೆ ಶುರು ಮಾಡಿದ್ದರಿಂದ. ಹಾಗಾಗಿ ನಾನು ಕೂಡ ಈ ವರ್ಷದ ಹುಟ್ಟುಹಬ್ಬದಂದು ನಿಮ್ಮನ್ನ ನೋಡಬೇಕು. ನಿಮ್ಮೊಂದಿಗೆ ಸಮಯ ಕಳೆಯಬೇಕು ಅಂದುಕೊಂಡಿದ್ದೆ. ಆದರೆ ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಇನ್ನೂ ಸ್ವಲ್ಪವೇ ಸ್ವಲ್ಪ ಸಮಯ ಕೊಡಿ.. ನಿಮಗಾಗಿ ವಿಭಿನ್ನವಾಗಿರೋದೆನನ್ನೂ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿಯವರೆಗೂ ನಿಮ್ಮ ತಾಳ್ಮೆ ಮತ್ತು ಪ್ರೀತಿಯೇ ನನಗೆ ಈ ವರ್ಷದ ಹುಟ್ಟುಹಬ್ಬದ ನಿಮ್ಮ ಉಡುಗೊರೆ . ಕ್ಷಮಿಸಿ..ಈ ವರ್ಷದ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ, ಆದರೆ ಆದಷ್ಟು ಬೇಗ ನಿಮಗೆ ಸಿಗುತ್ತೇನೆ ಮತ್ತು ನಿಮ್ಮ ಕಾಯುವಿಕೆಯನ್ನುಅರ್ಥಪೂರ್ಣವಾಗಿಸುತ್ತೇನೆ” ನಿಮ್ಮ ಪ್ರೀತಿಯ ಯಶ್- ಎಂದು ಬರೆದುಕೊಂಡಿದ್ದಾರೆ..
Rocking star Yash: Actor Yash wrote a letter to his fans before his birthday.








