Hariyana : ಬೈಕ್ ನಲ್ಲಿ ಹೋಗಲು ನಿರಾಕರಿಸಿದ್ದಕ್ಕೆ ಮಹಿಳೆ ಮೇಲೆ ಹೆಲ್ಮೆಟ್ ನಿಂದ ಹಲ್ಲೆ…
ತನ್ನೊಂದಿಗೆ ಬೈಕ್ ನಲ್ಲಿ ಹೋಗಲು ನಿರಾಕರಿಸಿದ್ದಕ್ಕೆ ಮಹಿಳೆ ಮೇಲೆ ಹೆಲ್ಮೆಟ್ ನಿಮದ ಹೊಡೆದಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ಹಲ್ಲೆ ಮಾಡಿದ ವ್ಯಕ್ತಿಯನ್ನ ಕಮಲ್ ಎಂದು ಗುರುತಿಸಲಾಗಿದೆ.
ಕಮಲ್ ಎಂಬ ವ್ಯಕ್ತಿಯ ಜೊತೆ ಬೈಕ್ ನಲ್ಲಿ ಹೋಗಲು ಮಹಿಳೆ ನಿರಾಕರಿಸಿದ ಕಾರಣ ನೆರೆಹೊರೆಯಲ್ಲಿಯೇ ವಾಸಿಸುತ್ತಿದ್ದ ಮಹಿಳೆ ಮೇಲೆ ಹೆಲ್ಮೆಟ್ ನಿಂದ ಹಲ್ಲೆ ಮಾಡಲಾಗಿದೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾರೆ ಮತ್ತು ಆಸ್ಪತ್ರೆಗೆ ಸಾಗಿಸಲಾಗಿದೆ. ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಗುರುಗ್ರಾಮ ಎಸಿಪಿ ಮನೋಜ್ ಕೆ ತಿಳಿಸಿದ್ದಾರೆ.
Hariyana : a man named Kamal hitting a woman with his helmet after she refused to ride on his bike.








