ಗದಗ: ಮಹಾಮಾರಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಗದಗ್ ಜಿಲ್ಲೆಯ ಡಯಾಲಿಸಿಸ್ ಕೇಂದ್ರವೊಂದರ ಟೆಕ್ನಿಷಿಯನ್ ಸೇರಿದಂತೆ ಮೂವರು ಡಿಸ್ಚಾರ್ಜ್ ಆಗಿದ್ದಾರೆ. ಡಯಾಲಿಸಿಸ್ ಪರೀಕ್ಷೆಗೆಂದು ಬಂದಿದ್ದ ಪಿ-4079 ಸೋಂಕಿತನ ಸಂಪರ್ಕದಿಂದ ಗದಗ ಜಿಲ್ಲೆಯ ಹೊಳೆ ಆಲೂರಿನ ಡಯಾಲಿಸಿಸ್ ಕೇಂದ್ರವೊಂದರ ಸಿಬ್ಬಂದಿ ಪಿ-5015ಗೂ ಕೊರೊನಾ ಪಾಸಿಟಿವ್ ಬಂದಿತ್ತು. ಇಬ್ಬರನ್ನು ಗದಗ್‍ನ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಬಳಿಕ ಇಬ್ಬರೂ ಗುಣಮುಖರಾಗಿದ್ದಾರೆ. ಇವರ ಮಜತೆಗೆ ಲಕ್ಕುಂಡಿ ನಿವಾಸಿ 29 ಹರೆಯದ ವ್ಯಕ್ತಿಯೂ ಕೂಡ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಡಿಸ್ಚಾರ್ಜ್ ಆದ ಮೂವರನ್ನೂ ಆತ್ಮೀಯವಾಗಿ ಬಿಡುಗಡೆ ಬೀಳ್ಕೊಡಲಾಯಿತು.
ಮೂವರನ್ನು ಡಿಸ್ಚಾರ್ಜ್ ಮಾಡುವ ಮುನ್ನ ಗಂಟಲು ದ್ರವದ ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷೆಯಲ್ಲೂ ನೆಗೆಟಿವ್ ಬಂದಿದೆ. ಡಿಸ್ಚಾರ್ಜ್ ಆದವರನ್ನು 14 ದಿನಗಳ ಹೋಂ ಕ್ವಾರಂಟೇನ್‍ನಲ್ಲಿ ಇರಲು ಸೂಚನೆ ನೀಡಲಾಗಿದೆ ಎಂದು ಗದಗ ಜಿಲ್ಲಾಸ್ಪತ್ರೆ ನಿರ್ದೇಶಕ ಡಾ.ಪಿಎಸ್ ಭೂಸರೆಡ್ಡಿ ತಿಳಿಸಿದ್ದಾರೆ.