IND vs SRI : ಸೂರ್ಯನ ಅಬ್ಬರಕ್ಕೆ ತತ್ತರಿಸಿದ ಲಂಕಾ ಆಟಗಾರರು..!!
ಟೀಮ್ ಇಂಡಿಯಾದ ಮಿಸ್ಟರ್ 360 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ವಿಸ್ಫೋಟಕ ಶತಕದ ನೆರವಿನಿಂದ ಸರಣಿ ನಿರ್ಧರಿಸುವ ಪಂದ್ಯದಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ 91 ರನ್ ಗೆಲುವು ದಾಖಲಿಸಿತು. ಇದರೊಂದಿಗೆ 2-1 ಅಂತರದಿಂದ ಭಾರತ ಸರಣಿ ಗೆದ್ದು ಬೀಗಿತು.
ರಾಜ್ ಕೋಟ್ ಅಂಗಳದಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತು. ಓಪನರ್ ಇಶನ್ ಕಿಶನ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
ರಾಹುಲ್ ತ್ರಿಪಾಠಿ 35, ಶುಭಮನ್ ಗಿಲ್ 46, ನಾಲ್ಕನೆ ಕ್ರಮಾಂಕದಲ್ಲಿ ಬಂದ ಸೂರ್ಯ ಕುಮಾರ್ ಸ್ಫೋಟಕ ಬ್ಯಾಟಿಂಗ್ ಮಾಡಿ 26 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಲಂಕಾ ಬೌಲರ್ಗಳನ್ನು ಬೆಂಡೆತ್ತಿದ ಸೂರ್ಯ 45 ಎಸೆತಗಳಲ್ಲಿ ಶತಕ ಪೂರೈಸಿದರು.
ಸೂರ್ಯ ಕುಮಾರ್ (51 ಎಸೆತ, 7 ಬೌಂಡರಿ, 9 ಸಿಕ್ಸರ್ ) ಅಜೇಯ 112 ರನ್ ಸಿಡಿಸಿದರು,ನಾಯಕ ಹಾರ್ದಿಕ್ ಪಾಂಡ್ಯ 4, ದೀಪಕ್ ಹೂಡಾ 4, ಅಕ್ಸರ್ ಪಟೇಲ್ ಅಜೇಯ 21 ರನ್ ಗಳಿಸಿದರು. ಲಂಕಾ ಪರ ದಿಲ್ಶಾನ್ ಮಧುಶನಕಾ 2, ಚಾಮಿಕಾ ಕರುಣಾರತ್ನೆ ಹಾಗೂ ವನಿಂದು ಹಸರಂಗ ತಲಾ 1 ವಿಕೆಟ್ ಪಡೆದರು.
229 ರನ್ ಗುರಿ ಬೆನ್ನತ್ತಿದ ಲಂಕಾ ಭಾರತದ ವೇಗಿಗಳ ದಾಳಿಗೆ ಮಂಕಾಯಿತು. ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ವೇಗಿ ಆರ್ಷದೀಪ್, ಪಾತುಮ್ ನಿಸ್ಸಾಂಕಾ 15 ರನ್,ದಸುನ್ ಶನಕಾ 23, ದಿಲ್ಶಾನ್ ಮಧುಶನಕಾ ವಿಕೆಟ್ ಪಡೆದರು.
ಕುಸಾಲ್ ಮೆಂಡೀಸ್ 23, ಆವಿಷ್ಕಾ ಫರ್ನೆಂಡೊ 1, ಧನಂಜಯ ಡಿಸಿಲ್ವಾ 22, ಚರಿತ್ ಅಸಲಂಕಾ 19 ರನ್ ಗಳಿಸಿದರು.
ಭಾರತ ಪರ ಆರ್ಷದೀಪ್ 20ಕ್ಕೆ 3 ವಿಕೆಟ್, ಹಾರ್ದಿಕ್ 30ಕ್ಕೆ 2, ಉಮ್ರಾನ್ ಮಲ್ಲಿಕ್ 31ಕ್ಕೆ 2, ಯಜ್ವಿಂದರ್ ಚಾಹಲ್ 30ಕ್ಕೆ 2 ವಿಕೆಟ್ ಪಡೆದರು.
ಶತಕ ವೀರ ಸೂರ್ಯ ಕುಮಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿ, ಆಲ್ರೌಂಡರ್ ಅಕ್ಸರ್ ಪಟೇಲ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.








