PM Modi : ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ರೋಡ್ ಶೋ..!!
26 ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ ನೀಡುವ ಸಲುವಾಗಿ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದಾರೆ.. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಬಂದಿಳಿದ ಮೋದಿ ಅವರಿಗೆ ಭರ್ಜರಿ ಸ್ವಾಗತವನ್ನ ನೀಡಿ ಸನ್ಮಾನಿಸಿದ್ದಾರೆ , ಶಾಸಕರು , ರಾಜಕೀಯ ನಾಯಕರು..
ಜನರು ಇಕ್ಕೆಲಗಳಲ್ಲಿ ನಿಂತು ಭವ್ಯ ಸ್ವಾಗತ ಕೋರಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರೈಲ್ವೇ ಮೈದಾನಕ್ಕೆ 8 ಕಿ.ಮೀ ರೋಡ್ ಶೋ ನಡೆಸಿ ಆಗಮಿಸಿದರು. ಮೋದಿ ಕಾರು ಬರುತ್ತಿದ್ದಂತೆ ಅಭಿಮಾನಿಗಳು ಹೂ ಮಳೆ ಸುರಿಸಿ “ಜೈ ಮೋದಿ” ಘೋಷಣೆ ಕೂಗಿದರು.
ದಾರಿ ಮಧ್ಯೆ ಕಾರು ನಿಲ್ಲಿಸಿದ ಪ್ರಧಾನಿ ಮೋದಿ ಅವರು ತಮ್ಮನ್ನ ನೋಡಲು ಕಿಕ್ಕಿರಿದು ಸೇರಿದ್ದ ಜನರತ್ತ ಕೈ ಬೀಸಿದರು..