Bagalakote : ಒಂದೇ ಬಾರಿಗೆ ನಾಲ್ಕು ಕರುಗಳಿಗೆ ಜನ್ಮ ನೀಡಿದ ಹಸು….
ಹಸುವೊಂದು ಒಂದೇ ಬಾರಿಗೆ ನಾಲ್ಕು ಕರುಗಳಿಗೆ ಜನ್ಮ ನೀಡಿ ಜನರಲ್ಲಿ ಅಚ್ಚರಿ ಮೂಡಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಆಸಂಗಿ ಗ್ರಾಮದಲ್ಲಿ ಘಟಿಸಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಮಹಾವೀರ ಶಿರಹಟ್ಟಿ ರೈತರಿಗೆ ಸೇರಿದ ಹಸುವು ನಾಲ್ಕು(4) ಕರುಗಳಿಗೆ ಜನ್ಮ ನೀಡಿದ್ದು, ಇದರಲ್ಲಿ ಎರಡು(2) ಹೆಣ್ಣು ಕರುಗಳು, ಎರಡು(2) ಹೋರಿ ಕರುಗಳಿಗೆ ಜನ್ಮ ನೀಡಿದೆ. ನಾಲ್ಕು ಕರುಗಳು ಸಹ ಆರೋಗ್ಯವಾಗಿದ್ದು, ಹಸುವಿನ ಮಾಲೀಕರಿಗೆ ಎಲ್ಲಿಲ್ಲದ ಹರ್ಷಕ್ಕೆ ಕಾರಣವಾಗಿದೆ.
ಈ ಘಟನೆಯಿಂದ ನಮ್ಮ ಕುಟುಂಬಕ್ಕೆ ಅಚ್ಚರಿಯೂ ಉಂಟಾಗಿದೆ ಎಂದು ರೈತ ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ನಮ್ಮ ಮನೆಯಲ್ಲಿ ಹಲವು ತಲೆಮಾರುಗಳಿಂದ ರೈತಾಪಿ ಕೆಲಸವನ್ನು ಮಾಡಿಕೊಂಡು ಬಂದಿದ್ದೇವೆ. ನಮ್ಮ ಕುಟುಂಬದಲ್ಲಿ 5 ಎಮ್ಮೆಗಳು,ನಾಲ್ಕು 12 ಹಸುಗಳು ಇದ್ದು ಎಲ್ಲವನ್ನೂ ಸಾಮಾನ್ಯವಾಗಿಯೇ ಮೇವು ಹಾಕಿ ಸಾಕಣೆ ಮಾಡುತ್ತಿದ್ದೇವೆ. ಆದರೆ, ಈಗ ನಮ್ಮ ಹಸುವೊಂದು ಚೊಚ್ಚಲ ಹೆರಿಗೆಯ ವೇಳೆ ನಾಲ್ಕು ಕರುಗಳಿಗೆ ಜನ್ಮ ನೀಡಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.
Bagalakote : Cow gave birth to four calves at once….