IND vs AUS ತಂಡಕ್ಕೆ ಆಯ್ಕೆಯಾಗದಕ್ಕೆ ಜಂಪಾ ಬೇಸರ
ಮುಂಬರುವ ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಗೆ ತಂಡದಿಂದ ನನ್ನನ್ನು ಕೈಬಿಟ್ಟಿದ್ದು ನನಗೆ ಗೊಂದಲವಾಗಿದೆ ಮತ್ತು ನಿರಾಸೆಯಾಗಿದೆ ಎಂದು ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಾಮ್ ಜಂಪಾ ಹೇಳಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿರುವ 18 ಆಟಗಾರರನ್ನೊಳಗೊಂಡ ತಂಡದಲ್ಲಿ
ನಾಲ್ವರು ಸ್ಪಿನ್ನರ್ಗಳಿಗೆ ಅವಕಾಶ ನೀಡಲಾಗಿದೆ. ಎಡಗೈ ಸ್ಪಿನ್ನರ್ ಆಶ್ಟನ್ ಅಗಾರ್, ಟೊಡ್ ಮುರ್ಫೆ, ನಾಥನ್ ಲಿಯಾನ್ ಮತ್ತು ಮಿಚ್ ಸ್ವೆಪ್ಸನ್ ಸ್ಥಾನ ಪಡೆದ ಸ್ಪಿನ್ನರ್ಸ್ಗಳಾಗಿದ್ದಾರೆ.
ಆಯ್ಕೆ ಮಂಡಳಿಯವರು ನನ್ನ ಬಗ್ಗೆ ಸಕರಾತ್ಮಕ ಭಾವನೆ ಇತ್ತು ಮತ್ತು ನನಗೂ ತಂಡದಲ್ಲಿ ಸ್ಥಾನ ಸಿಗುವ ವಿಶ್ವಾಸವಿತ್ತು. ನನಗೆ ತುಂಬ ನಿರಾಸೆಯಾಗಿದೆ. ನನ್ನಲ್ಲಿ ಇರಬೇಕಿತ್ತು ಎಂದು ಜಂಪಾ ಆಯ್ಕೆ ಮಂಡಳಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ನಾನು ಭಾರತದ ಸರಣಿ ಬಗ್ಗೆ ಕಾತರದಿಂದ ಇದ್ದೆ. ನನ್ನ ಬೌಲಿಂಗ್ ಶೈಲಿ ತಂಡಕ್ಕೆ ನೆರವಾಗುತ್ತದೆ ಎಂದು ಭಾವಿಸಿರಿವುದಾಗಿ ತಿಳಿಸಿದ್ದಾರೆ.
ಜಂಪಾ ಬದಲು ಯುವ ಸ್ಪಿನ್ನರ್ ಸ್ವೆಪ್ಸನ್ಗೆ ಅವಕಾಶ ನೀಡಲಾಗಿದೆ. ಸ್ವಪ್ಸನ್ ಉಪಖಂಡದಲ್ಲಿ ಕಳೆದ ವರ್ಷ ಟೆಸ್ಟ್ ಆಡಿದ್ದು 8 ಇನ್ನಿಂಗ್ಸ್ ಗಳಿಂದ 10 ವಿಕೆಟ್ ಪಡೆದಿದ್ದಾರೆ.
ರೆಡ್ ಬಾಲ್ನಲ್ಲಿ ಮಿಂಚದಿರುವುದೇ ಜಂಪಾ ಅವರನ್ನು ಕೈಬಿಡಲು ಕಾರಣ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
IND vs AUS , adam zampa disapointment








