ಶೀಘ್ರ ಗುಣಮುಖರಾಗುವಂತೆ ಶಾಹೀದ್ ಆಫ್ರಿದಿಗೆ ಗೌತಮ್ ಗಂಭೀರ್ ಹಾರೈಕೆ
ಭಿನ್ನಾಭಿಪ್ರಾಯಗಳು. ಸಿಟ್ಟು, ದ್ವೇಷ ಎಷ್ಟು ಬೇಕಾದ್ರೂ ಇರಬಹುದು. ಆದ್ರೆ ಮಾನವೀಯತೆ ಹೊಂದಿದ ಹೃದಯವಂತರು ಅದನ್ನೆಲ್ಲಾ ಮರೆತು ಬಿಡ್ತಾರೆ. ಹಾಗೇ ಗೌತಮ್ ಗಂಭೀರ್ ಕೂಡ. ಗೌತಮ್ ಗಂಭೀರ್, ಟೀಮ್ ಇಂಡಿಯಾದ ಮಾಜಿ ಆಟಗಾರ. ಹಾಲಿ ಬಿಜೆಪಿ ಸಂಸದ. ಕ್ರಿಕೆಟಿಗನಾಗಿ, ರಾಜಕಾರಣಿಯಾಗಿರುವುದಕ್ಕಿಂತಲೂ ಗೌತಮ್ ಗಂಭೀರ್‍ನಲ್ಲಿ ಸಹಾಯ ಹಸ್ತ ಮಾಡುವ ಗುಣವಿದೆ. ಇದಕ್ಕೆ ಸಾಕಷ್ಟು ನಿದರ್ಶನಗಳಿವೆ. ದೇಶ, ಸೇನೆ, ನಮ್ಮತನದ ವಿಚಾರ ಬಂದಾಗ ಗಂಭೀರ್ ಯಾವತ್ತಿಗೂ ಹಿಂದೆ ಸರಿಯುವವರಲ್ಲ.
ಇದೀಗ ಎಲ್ಲರಿಗೂ ಗೊತ್ತಿರುವ ಹಾಗೇ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹೀದ್ ಆಫ್ರಿದಿಯವರು ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ಅವರೇ ಟ್ವಿಟರ್‍ನಲ್ಲಿ ಹೇಳಿಕೊಂಡಿದ್ದಾರೆ. ಕಳೆದ ಗುರುವಾರದಿಂದ ಅನಾರೋಗ್ಯದಿಂದ
ಬಳಲುತ್ತಿದ್ದೆ. ಆದ್ರೆ ಟೆಸ್ಟ್ ಮಾಡಿದಾಗ ಕೋವಿಡ್-19 ಸೋಂಕು ಪತ್ತೆಯಾಗಿದೆ. ಶೀಘ್ರ ಗುಣಮುಖವಾಗುವಂತೆ ದೇವರಲ್ಲಿ ಪ್ರಾರ್ಥಿಸಿ ಅಂತ ಹೇಳಿಕೊಂಡಿದ್ದರು.
ಇದಕ್ಕೆ ಗೌತಮ್ ಗಂಭೀರ್ ಪ್ರತಿಕ್ರಿಯೆ ನೀಡಿದ್ದಾರೆ. ಯಾರಿಗೂ ಕೂಡ ಕೋವಿಡ್-19 ಸೋಂಕು ಹರಡಬಾರದು. ನನಗೆ ಮತ್ತು ಶಾಹೀದ್ ಆಫ್ರಿದಿಗೆ ರಾಜಕೀಯವಾಗಿ
ಭಿನ್ನಾಭಿಪ್ರಾಯಗಳಿವೆ. ಆದ್ರೆ ನಾನು ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಎಂದು ಹಾರೈಸುತ್ತೇನೆ ಅಂತ ಗಂಭೀರ್ ಟ್ವಿಟರ್‍ನಲ್ಲಿ ಹೇಳಿದ್ದಾರೆ.
ಹೌದು, ಗೌತಮ್ ಗಂಭೀರ್ ಮತ್ತು ಶಾಹೀದ್ ಆಫ್ರಿದಿ ಮೈದಾನದಲ್ಲಿ ಇರುವಾಗಲೇ ಎರಡು ಮೂರು ಬಾರಿ ಪರಿಸ್ಪರ ಜಗಳ ಮಾಡಿಕೊಂಡಿದ್ದರು. ಹಾಗೇ ರಾಜಕೀಯ ವಿಚಾರದಲ್ಲೂ ಜಟಾಪಟಿ ನಡೆಸುತ್ತಿದ್ದರು. ಸಾಮಾಜಿಕ ಜಾಲ ತಾಣದಲ್ಲೂ ಆರೋಪ -ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಿದ್ದರು. ಆದ್ರೆ ಈಗ ಗಂಭೀರ್ ಎಲ್ಲವನ್ನು ಮರೆತು ಆಫ್ರಿದಿ ಬೇಗ ಗುಣಮುಖರಾಗಲಿ ಅಂತ ಹಾರೈಸಿದ್ದಾರೆ.
ಅಷ್ಟೇ ಅಲ್ಲ, ಗಂಭೀರ್ ಕೇವಲ ಆಫ್ರಿದಿಗೆ ಮಾತ್ರ ಹಾರೈಸಲಿಲ್ಲ. ಬದಲಾಗಿ ಯಾರೆಲ್ಲಾ ಕೊರೋನಾ ವೈರಸ್ ಸೋಕಿಂನಿಂದ ಬಳಲುತ್ತಿದ್ದಾರೋ ಅವರೆಲ್ಲರೂ ಶೀಘ್ರದಲ್ಲೇ ಗುಣಮುಖರಾಗಲಿ ಅಂತನೂ ಹೇಳಿದ್ದಾರೆ.
ಇನ್ನು ಆಫ್ರಿದಿ ಆದಷ್ಟು ಬೇಗ ಗುಣಮುಖರಾಗಲಿ ಅಂತ ಅನೇಕ ಕ್ರಿಕೆಟಿಗರು ಟ್ವಿಟರ್‍ನಲ್ಲಿ ಹಾರೈಸಿಸಿದ್ದಾರೆ. ಶೀಘ್ರವೇ ಗುಣಮುಖರಾಗಿ ಶಾಹೀದ್ ಭಾಯ್ ಅಂತ ವಾಹಬ್ ರಿಯಾಝ್, ಸೋಹೈಲ್ ತನ್ವೀರ್ ಹೇಳಿದ್ದಾರೆ.
ಶಾಹೀದ್ ಆಫ್ರಿದಿ ಅವರು, ಪಾಕಸ್ತಾನದಲ್ಲಿ ಶಾಹೀದ್ ಆಫ್ರಿದಿ ಪೌಂಡೇಷನ್ ಮೂಲಕ ಸಮಾಜ ಸೇವೆಯನ್ನು ಮಾಡ್ತಾ ಇದ್ದಾರೆ. ಅಲ್ಲದೆ ಕೋವಿಡ್ ವಾರಿಯರ್ಸ್ ಆಗಿಯೂ ಸೇವೆ ಮಾಡ್ತಾ ಇದ್ರು.








