Uttar Kannada : ಮುಂಡಗೋಡುವಿನಲ್ಲಿ ನವಜಾತ ಶಿಶು ಕಳೆಬರಹ ಪತ್ತೆ…
ನವಜಾತ ಶಿಶುವಿನ ಕಳೆಬರಹ ರಟ್ಟಿನ ಬಾಕ್ಸ್ ನಲ್ಲಿ ಪತ್ತೆಯಾಗಿದ್ದು, ಕಳೆಬರಹವನ್ನ ಬೀದಿ ನಾಯಿಗಳು ಎಳೆದು ತಿಂದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಬಳಿಯ ಹುಬ್ಬಳ್ಳಿ ರಸ್ತೆಯಲ್ಲಿ ನಡೆದಿದೆ.
ಹಸುಗೂಸನ್ನ ತಾಯಿ ರಟ್ಟಿನ ಬಾಕ್ಸ್ ನಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಶಿಶುವಿನ ದೇಹವನ್ನ ಬೀದಿ ನಾಯಿಗಳು ಎಳೆದು ತಂದು ರಸ್ತೆಯ ಮೇಲೆ ಹಾಕಿದ್ದು, ಶಿಶುವಿನ ದೇಹದ ಬಹುತೇಕ ಭಾಗವನ್ನ ತಿಂದು ಹಾಕಿವೆ.
ಸ್ಥಳಕ್ಕೆ ಪೊಲೀಸರು ಹಾಗೂ ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗಂಡು ಮಗುವಿನ ಕಳೆಬರಹ ಎಂದು ತಿಳಿದು ಬಂದಿದೆ. ಇನ್ನು ಈ ಕುರಿತು ಮುಂಡಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Uttar Kannada : Newborn baby’s handwriting found in Mundagodu…