Hockey World Cup : ಇಂದು ಕ್ವಾರ್ಟರ್ಗೇರುತ್ತಾ ಭಾರತ ಹಾಕಿ ತಂಡ..!!
ಕ್ವಾರ್ಟರ್ ಫೈನಲ್ಸ್ ಕನಸು ಕಾಣುತ್ತಿರುವ ಭಾರತ ಪುರುಷರ ಹಾಕಿ ತಂಡ ಇಂದು ಕ್ರಾಸ್ಓವರ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಇಲ್ಲಿನ ಕಳಿಂಗಾ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಹಾಕಿ ತಂಡ ಗೆಲ್ಲಲ್ಲೇಬೆಕಾದ ಒತ್ತಡವನ್ನು ಎದುರಿಸುತ್ತಿದೆ.
ಕ್ರಾಸ್ ಓವರ್ ಪಂದ್ಯವೂ ನಾಕೌಟ್ ಪಂದ್ಯವಾಗಿದ್ದು ಈ ಪಂದ್ಯವನ್ನು ಕೈಚೆಲ್ಲಿದರೆ ಭಾರತ ಪ್ರಶಸ್ತಿ ಗೆಲ್ಲುವ ರೇಸ್ ನಿಂದ ಹೊರ ಬೀಳಲಿದೆ. ಗೆದ್ದರೆ ಕ್ವಾರ್ಟರ್ನಲ್ಲಿ ಬಲಿಷ್ಠ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.
ಭಾರತದ ಪ್ರಮುಖ ಮಿಡ್ ಫೀಲ್ಡರ್ ಹಾರ್ದಿಕ್ ಸಿಂಗ್ ಹ್ಯಾಮ್ ಸ್ಟ್ರಿಂಗ್ ಗಾಯದ ಸಮಸ್ಯೆಗೆ ಗುರಿಯಾಗಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅವರ ಅನುಪಸ್ಥಿತಿ ತಂಡದ ಪರಿಣಾಮ ಬೀರದಂತೆ ನೋಡಿಕೊಳ್ಳುವ ಜವಾಬ್ದಾರಿ ಮನ್ ಪ್ರೀತ್ ಅವರ ಮೇಲಿದೆ.
ನ್ಯೂಜಿಲೆಂಡ್ ಎದುರು ಭಾರತ ಉತ್ತಮ ದಾಖಲೆ ಹೊಂದಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ನಡೆದ ಎಫ್ಐಎಚ್ ಪ್ರೊ ಹಾಕಿ ಲೀಗ್ ಪಂದ್ಯದಲ್ಲಿ ಭಾರತ 2 ಪಂದ್ಯಗಳನ್ನು ಜಯಿಸಿತ್ತು.
ಇದುವರೆಗೂ ನ್ಯೂಜಿಲೆಂಡ್ ಮತ್ತು ಭಾರತ 44 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದಲ್ಲರಲ್ಲಿ ಭಾರತ 24 ಪಂದ್ಯಗಳನ್ನು ಗೆದ್ದರೆ 15 ಪಂದ್ಯಗಳನ್ನು ನ್ಯೂಜಿಲೆಂಡ್ ಗೆದ್ದಿದೆ 5 ಪಂದ್ಯಗಳು ಡ್ರಾನಲ್ಲಿ ಅಂತ್ಯ ಕಂಡಿವೆ.
Hockey World Cup , team india quarter final..??







