Elon Musk : ಟ್ವೀಟರ್ ಗೆ ಪೆಟ್ಟು ತಂದ ಎಲಾನ್ ಮಸ್ಕ್ – ಡಿಸೆಂಬರ್ ಆದಾಯ ಶೇ 71 ರಷ್ಟು ಕುಸಿತ…
ಎಲಾನ್ ಮಸ್ಕ್ ಅವರ ನಿರ್ಧಾರಗಳಿಂದ ಟ್ವಿಟರ್ ಕಂಪನಿಯು ನಷ್ಟ ಅನುಭವಿಸುತ್ತಿದೆ. ಎಲಾನ್ ಮಸ್ಕ್ ಟ್ವೀಟರ್ ಕಂಪನಿಯನ್ನ ಸ್ವಾಧೀನಪಡಿಸಿಕೊಂಡ ನಂತರದಿಂದ ಕಂಪನಿಯ ಷೇರುಗಳು ಭಾರೀ ಪ್ರಮಾಣದಲ್ಲಿ ಕುಸಿದೆವೆ ಎಂದು ತಿಳಿದು ಬಂದಿದೆ. ಟ್ವಿಟರ್‌ನ ಆದಾಯಕ್ಕೆ ಸಂಬಂಧಿಸಿದಂತೆ ಇತ್ತೀಚಿನ ವರದಿಯೊಂದು ಬಹಿರಂಗವಾಗಿದೆ.
‘ಸ್ಟ್ಯಾಂಡರ್ಡ್ ಮೀಡಿಯಾ ಇಂಡೆಕ್ಸ್ (SMI)’ ವರದಿಯ ಪ್ರಕಾರ.. ಟ್ವಿಟರ್ ಎಲೋನ್ ಮಸ್ಕ್ ತೆಗೆದುಕೊಂಡ ನಂತರದಿಂದ ಜಾಹಿರಾತುದಾರರು ಟ್ವೀಟರ್ ನಲ್ಲಿ ಹಣವನ್ನ ಕಡಿಮೆ ಖರ್ಚು ಮಾಡುತ್ತಿದ್ದಾರೆ. ಅದರಂತೆ, ಕಳೆದ ಡಿಸೆಂಬರ್‌ನಲ್ಲಿ ಜಾಹೀರಾತುಗಳಿಂದ Twitter ಆದಾಯವು 71 ಪ್ರತಿಶತದಷ್ಟು ಕಡಿಮೆಯಾಗಿದೆ. ನವೆಂಬರ್‌ನಲ್ಲಿ ಶೇ 55ರಷ್ಟು ಆದಾಯ ಇಳಿಕೆಯಾಗಿದೆ. ಸಾಮಾನ್ಯವಾಗಿ ರಜಾ ಕಾಲವಾದ್ದರಿಂದ ಜಾಹೀರಾತುಗಳು ಇನ್ನಷ್ಟು ಹೆಚ್ಚಿಗೆ ಬರುತ್ತವೆ. ಆದರೆ, ಈ ಬಾರಿ ವ್ಯತಿರಿಕ್ತವಾಗಿದೆ.
ಮಾರುಕಟ್ಟೆಯಲ್ಲಿರುವ ಉನ್ನತ ಜಾಹೀರಾತು ಏಜೆನ್ಸಿಗಳು ಈ ಮಟ್ಟಿಗೆ ಟ್ವಿಟರ್‌ನಲ್ಲಿ ತಮ್ಮ ಖರ್ಚುಗಳನ್ನು ಕಡಿಮೆ ಮಾಡಿವೆ. ಆದಾಗ್ಯೂ, ಟ್ವಿಟರ್ ಈ ಪರಿಸ್ಥಿತಿಯನ್ನು ನಿವಾರಿಸಲು ಪ್ರಯತ್ನಿಸುತ್ತಿದೆ. ಜಾಹೀರಾತು ಏಜೆನ್ಸಿಗಳನ್ನ ಆಕರ್ಷಿಸಲು ಪ್ರಯತ್ನಿಸುತ್ತಿದೆ.ಇದರ ಭಾಗವಾಗಿ ಈ ಹಿಂದೆ ಅಳಿಸಲಾಗಿದ್ದ ರಾಜಕೀಯದ ಜಾಹಿರಾತುಗಳನ್ನ ಮರುಸ್ಥಾಪಿಸಲಾಗುತ್ತಿದೆ.
ಟ್ವಿಟರ್ ನ ದೈನಂದಿನ ಆದಾಯವೂ ಶೇ.40ರಷ್ಟು ಕುಸಿದಿದೆ. ಪ್ರಮುಖ ಟಾಪ್ ಬ್ರಾಂಡ್‌ಗಳು ಕೂಡ ಟ್ವಿಟರ್‌ನಲ್ಲಿ ಕಡಿಮೆ ಜಾಹೀರಾತು ನೀಡುತ್ತಿವೆ. ಕೆಲವು ಕಂಪನಿಗಳು ಜಾಹೀರಾತುಗಳನ್ನ ಸಂಪೂರ್ಣವಾಗಿ ತೆಗೆದುಹಾಕಿವೆ. ಅಂತಹ ಕಂಪನಿಗಳಲ್ಲಿ ಆಡಿ, ಫೋರ್ಡ್, ಎಚ್‌ಪಿ, ಡೆಲ್, ಮೆಟಾ, ಕೋಕಾ ಕೋಲಾ, ವೆಲ್ಸ್ ಫಾರ್ಗೋ, ಅಮೇರಿಕನ್ ಎಕ್ಸ್‌ಪ್ರೆಸ್ ಸೇರಿವೆ. ಟಾಪ್ 100 ಕಂಪನಿಗಳಲ್ಲಿ ಟಾಪ್ 50 ಕಂಪನಿಗಳು ಟ್ವೀಟರ್ ತೊರೆದಿವೆ.
Elon Musk: Twitter December revenue dropped by 71 percent…








