Delhi Girl Raped : 3 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಇಬ್ಬರ ಬಂಧನ…
ಮೂರು ವರ್ಷದ ಮಗುವಿನ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಭಯಾನಕ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ.
ದಕ್ಷಿಣ ದೆಹಲಿಯ ಫತೇಪುರ್ ಬೆರಿಯ ಮೂರು ವರ್ಷದ ಬಾಲಕಿ ಶುಕ್ರವಾರ ಬೆಳಗ್ಗೆ ನಾಪತ್ತೆಯಾಗಿದ್ದಳು. ಬಾಲಕಿಯ ಪೋಷಕರು ಆಕೆಗಾಗಿ ಹುಡುಕಾಟ ಆರಂಭಿಸಿದ್ದಾಗ ನೆರೆಹೊರೆಯ ವ್ಯಕ್ತಿಯೊಬ್ಬ ಬಂದು ಅವರನ್ನ ಭೇಟಿ ಮಾಡಿ ಗ್ರಾಮದ ಹೊರಹೊಲಯದ ಅರಣ್ಯದಲ್ಲಿ ಮಗುವನ್ನ ನೋಡಿರುವುದಾಗಿ ತಿಳಿಸಿದ್ದಾರೆ.
ಮಗುವನ್ನ ಇಬ್ಬರು ವ್ಯಕ್ತಿಗಳು ಕರೆದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಬಾಲಕಿಯ ಪೋಷಕರು ಸ್ಥಳಕ್ಕೆ ಧಾವಿಸಿದ್ದಾರೆ. ಬಾಲಕಿ ರಕ್ತಸ್ರಾವದಿಂದ ಅಳುತ್ತಿರುವುದನ್ನ ಕಂಡು ಬಾಲಕಿಯನ್ನ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ. ನಂತರ ಮಗುವನ್ನ ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ರಾಮ್ ನಿವಾಸ್ ಪಣಿಕಾ (27) ಮತ್ತು ಶಕ್ತಿಮಾನ್ ಸಿಂಗ್ (22) ಎಂದು ಗುರುತಿಸಲಾಗಿದೆ. ಇಬ್ಬರೂ ವಿವಾಹಿತರಾಗಿದ್ದು, ಸ್ಥಳೀಯ ಕಸ ಮರುಬಳಕೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
Delhi Girl Raped : 3-year-old girl gang-raped – Two arrested…








