ಪತ್ನಿಯನ್ನ ಕೊಂದು ಅವಳ ಸಮಾಧಿ ಮೇಲೆ ತರಕಾರಿ ಬೆಳೆದಿದ್ದಪತಿ !!! ಬಂಧನ…
ಮೂರು ಮಕ್ಕಳ ತಾಯಿಯಾಗಿದ್ದ ಪತ್ನಿಯನ್ನ ಕೊಂದು ಹೊಲದಲ್ಲಿ ಹೂತುಹಾಕಿ ಅದರ ಸಮಾಧಿಯ ಮೇಲೆ ತರಕಾರಿ ಬೆಳೆದಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪತಿ ತರಕಾರಿ ವ್ಯಾಪಾರಿ ದಿನೇಶ್ ಎಂಬಾತನನ್ನ ಗುರುವಾರ ಬಂಧಿಸಲಾಗಿದೆ.
ಜನವರಿ 25 ರಂದು ನಡೆದ ಜಗಳದಲ್ಲಿ ಪತಿ ದಿನೇಶ್ ತನ್ನ ಪತ್ನಿಯನ್ನ ಕತ್ತು ಹಿಸುಕಿ ಕೊಲೆಗೈದು, ಶವವನ್ನ ಒಂದು ದಿನ ಮನೆಯಲ್ಲಿಟ್ಟು ಹೊಲದಲ್ಲಿ ಹೂತು ಹಾಕಿದ್ದಾನೆ. ದೇಹ ಬೇಗನೇ ಕೊಳೆಯಲಿ ಎಂದು 30 ಕೆ.ಜಿ ಉಪ್ಪನ್ನ ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಯಾರಿಗೂ ಅನುಮಾನ ಬಾರದಂತಿರಲಿ ಎಂದು ಸಮಾಧಿ ಸ್ಥಳದಲ್ಲಿ ತರಕಾರಿ ಬೆಳೆದಿದ್ದಾನೆ. ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ದಿನಗಳ ನಂತರ ದಿನೇಶ್ ಎಂಬಾತನೇ ಪೊಲೀಸರಿಗೆ ನಾಪತ್ತೆ ದೂರು ದಾಖಲಿಸಿದ್ದಾನೆ. ತನಿಖೆ ನಡೆಸಿದಾಗ ದಿನೇಶ್ ತನ್ನ ಪತ್ನಿಗೆ ವಿವಾಹೇತರ ಸಂಬಂಧವಿದೆ ಎಂದು ಶಂಕಿಸಿ ಕೋಪದ ಭರದಲ್ಲಿ ಆಕೆಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ತನಿಖೆ ಮುಗಿದ ಕೂಡಲೇ ಪೊಲೀಸರು ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ, ಮಹಿಳೆಯ ಶವವನ್ನು ಹೊಲದಿಂದ ಹೊರತೆಗೆದು ಪೋಸ್ಟ್ ಮಾರ್ಟಮ್ ಮಾಡಿದ್ದಾರೆ.
Uttar pradesh : Husband killed his wife and grew vegetables on her grave !!! Arrest…








