Vani jayaram : ಸಂಗೀತ ಲೋಕವನ್ನ ಆಳುತ್ತಿದ್ದ ಲತಾ ಮಂಗೇಶ್ಕರ್ ಗೆ ಭಯ ಹುಟ್ಟಿಸಿದ್ದರು ವಾಣಿ ಜಯರಾಂ…
ಚಿತ್ರರಂಗದಲ್ಲಿ ಸರಣಿ ದುರಂತಗಳು ನಡೆಯುತ್ತಿವೆ. ನಟರಿಂದ ಹಿಡಿದು ತಂತ್ರಜ್ಞರವರೆಗೂ ಒಬ್ಬರ ನಂತರ ಒಬ್ಬರು ಸ್ವರ್ಗಸ್ಥರಾಗುತ್ತಿದ್ದಾರೆ. ಇತ್ತೀಚೆಗಷ್ಟೇ ತೆಲುಗು ಚಿತ್ರರಂಗದ ಕಲಾತಪಸ್ವಿ ಕೆ.ವಿಶ್ವನಾಥ್ ಅವರ ಸಾವು ಎಲ್ಲರನ್ನೂ ದಿಗ್ಭ್ರಮೆಗೊಳಿಸಿತ್ತು. ಈ ಘಟನೆ ಮರೆಯುವ ಮುನ್ನವೇ ಖ್ಯಾತ ಗಾಯಕಿ ವಾಣಿ ಜಯರಾಂ ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ಬರಸಿಡಿಲಿನಂತೆ ಬಡಿದಿದೆ.
ಗಾಯಕಿ ‘ವಾಣಿ ಜಯರಾಮ್’ ನಿನ್ನೆ (ಫೆಬ್ರವರಿ 4) ಚೆನ್ನೈನಲ್ಲಿರುವ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಸಾವಿನ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಗಾಯಕಿಯ ಹಣೆಯ ಮೇಲೆ ಆಗಿದ್ದ ಗಾಯಗಳನ್ನ ಕಂಡು ಮರಣೋತ್ತರ ಪರೀಕ್ಷೆಗೆ ಪೊಲೀಸರು ಕಳುಹಿಸಿದ್ದಾರೆ.
ವಾಣಿ ಜಯರಾಮ್ ತಮಿಳುನಾಡಿನವರು. ಸಂಗೀತ ಕುಟುಂಬದಲ್ಲಿ ಜನಿಸಿದ ವಾಣಿ ಬಾಲ್ಯದಿಂದಲೂ ಸಂಗೀತ ಅಭ್ಯಾಸ ಮಾಡಿದ್ದರು. ಹಿಂದಿ ಚಲನಚಿತ್ರಗಳ ಮೂಲಕ ಚಿತ್ರರಂಗಕ್ಕೆ ಪರಿಚಯಿಸಲ್ಪಟ್ಟರು, 1971 ರಲ್ಲಿ ಬಿಡುಗಡೆಯಾದ ಜಯಾ ಬಚ್ಚನ್ ಅವರ ಚಿತ್ರ ‘ಗುಡ್ಡಿ’ ಮೂಲಕ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಆ ಚಿತ್ರದಲ್ಲಿ ವಾಣಿ ಜಯರಾಮ್ ಹಾಡಿದ್ದ ಮೂರು ಹಾಡುಗಳಲ್ಲಿ ಮೂರು ಹಾಡುಗಳು ಸೂಪರ್ ಹಿಟ್ ಆಗಿದ್ದವು. ಇದು ಆಕಾಲದಲ್ಲಿ ಬಾಲಿವುಡ್ ಸಂಗೀತ ಲೋಕವನ್ನೇ ಆಳುತ್ತಿರುವ ಲತಾ ಮಂಗೇಶ್ಕರ್‌ಗೆ ಭಯ ಹುಟ್ಟಿಸಿತ್ತು. ಲತಾ ಮಂಗೇಶ್ಕರ್ ಅಭಿಮಾನಿಯಾಗಿದ್ದ ವಾಣಿ ಅವರು ಅವರಿಗೆ ಪ್ರತಿಸ್ಪರ್ದಿಯಾಗಿದ್ದರು.
ಬಾಲಿವುಡ್‌ನಿಂದ ದಕ್ಷಿಣ ಚಿತ್ರರಂಗದ ಕಡೆ ಮರಳಿದ ವಾಣಿ ಜಯರಾಮ್ ಆನಂತರ ಹಿಂತಿರುಗಿ ನೋಡಲೇ ಇಲ್ಲ. ತಮ್ಮ ಗಾಯನ ಮಧುರ್ಯಕ್ಕಾಗಿ ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದಾರೆ. ದಕ್ಷಿಣದಲ್ಲಿ ಹಾಡಿದ ಹಾಡುಗಳಿಗೆ 3 ರಾಷ್ಟ್ರಪ್ರಶಸ್ತಿಗಳನ್ನ ಗೆದ್ದುಕೊಂಡಿದ್ದಾರೆ. 1975 ರಲ್ಲಿ ಅಪೂರ್ವ ರಾಗಂಗಲ್ ಚಿತ್ರಕ್ಕಾಗಿ ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿ. 1980 ರಲ್ಲಿ ತೆಲುಗು ಎವರ್ಗ್ರೀನ್ ಮ್ಯೂಸಿಕಲ್ ಹಿಟ್ ಶಂಕರಾಭರಣಂಗಾಗಿ ತಮ್ಮ ಎರಡನೇ ರಾಷ್ಟ್ರೀಯ ಪ್ರಶಸ್ತಿ ಮತ್ತು ಮೂರನೇ ಪ್ರಶಸ್ತಿಯನ್ನು 1991 ರಲ್ಲಿ ಕೆ. ವಿಶ್ವನಾಥ್ ನಿರ್ದೇಶಿಸಿದ ಮತ್ತೊಂದು ಸಂಗೀತಮಯ ತೆಲುಗು ಚಲನಚಿತ್ರ ಸ್ವಾತಿ ಕಿರಣಂಗಾಗಿ ಸ್ವೀಕರಿಸಿದ್ದಾರೆ.
Vani Jayaram : Vani Jayaram scared Lata Mangeshkar who was ruling the music world…