Ointment Controversy – ರವೀಂದ್ರ ಜಡೇಜಾಗೆ ಕ್ಲೀನ್ ಚಿಟ್
ಆಯಿಂಟ್ಮೆಂಟ್ ವಿವಾದಕ್ಕೆ ಸಂಬಂಧಿಸಿದಂತೆ ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಆಲ್ರೌಂಡರ್ ರವೀಂದ್ರ ಜಡೇಜಾಗೆ ಕ್ಲೀನ್ ಚಿಟ್ ನೀಡಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯ ಆಸ್ಟ್ರೇಲಿಯಾ ವಿರುದ್ಧದ ನಾಗ್ಪುರ ಟೆಸ್ಟ್ ಪಂದ್ಯದ ಮೊದಲ ದಿನ ರವೀಂದ್ರ ಜಡೇಜಾ 5 ವಿಕೆಟ್ ಪಡೆದು ಮಿಂಚಿದ್ದರು.
ಬೌಲಿಂಗ್ ಮಾಡುವ ವೇಳೆ ಜಡೇಜಾ ವಿರುದ್ಧ ಆಸ್ಟ್ರೇಲಿಯಾ ಮಾಧ್ಯಮಗಳು ಕೈಬೆರಳುಗಳಿಗೆ ಏನೋ ಹಚ್ಚಿಕೊಂಡಿದ್ದಾರೆ ಎಂದು ಗಂಭೀರ ಆರೋಪಗಳನ್ನು ಮಾಡಿ ವಿವಾದ ಎಬ್ಬಿಸಿದ್ದವು.
ಅಸಲಿಗೆ ರವೀಂದ್ರ ಜಡೇಜಾ ಕೈಬೆರಳಿಗೆ ಗುಳ್ಳೆಯಾಗಿದ್ದರಿಂದ ನೋವು ತಾಳಲಾಗದೇ ಆಯಿಂಟ್ ಮೆಂಟ್ ಹಚ್ಚಿದ್ದರು. 5 ತಿಂಗಳಿನಿಂದ ದೂರವಿದ್ದ ಸೌರಾಷ್ಟ್ರ ಸ್ಟಾರ್ ನಿನ್ನೆ 22 ಓವರ್ ಹಾಕಿದ್ದರು. ಹೀಗಾಗಿ ಕೈಬೆರಳಿಗೆ ನೋವಾಗಿತ್ತು.
ಮ್ಯಾಚ್ ರಫರಿ ಪೈಕ್ರಾಫ್ಟ್ ಆಯಿಂಟ್ ಮೆಂಟ್ ಹಚ್ಚುತ್ತಿರುವ ವಿಡಿಯೋವನ್ನು ಗಮನಿಸಿದ್ದು ರವೀಂದ್ರ ಜಡೇಜಾ ಆಯಿಂಟ್ ಮೆಂಟ್ ಬಳಸಿದ್ದಾರೆ ಎಂದು ಹೇಳಿದ್ದಾರೆ. ಜಡೇಜಾ ಅಥವಾ ತಂಡದ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.
ಟೀಮ್ ಇಂಡಿಯಾದ ಆಡಳಿತ ಮಂಡಳಿ ಈ ಘಟನೆ ಬಗ್ಗೆ ಅಸಮಾಧಾನಗೊಂಡಿದೆ ಎಂದು ತಿಳಿದು ಬಂದಿದೆ.
Ointment Controversy – Raveendra jadeja got clean chit








